ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಅವರೇ ನಮ್ಮ ನೆಚ್ಚಿನ ಸಿಎಂ- ಸಚಿವ ಮುರುಗೇಶ್ ನಿರಾಣಿ.

ಬೆಂಗಳೂರು,ಆಗಸ್ಟ್,17,2022(www.justkannada.in):  ಕಾಂಗ್ರೆಸ್ ಬಳಿಕ  ಇದೀಗ ಬಿಜೆಪಿಯಲ್ಲೂ ಮುಂದಿನ ಸಿಎಂ ಕೂಗು ಕೇಳಿ ಬಂದಿದೆ. ಸಚಿವ ಮುರುಗೇಶ್ ನಿರಾಣಿ ಎಂದು ಅವರ ಅಭಿಮಾನಿಗಳು ಪೋಸ್ಟರ್ ಹಾಕಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ಹುಟ್ಟುಹಬ್ಬಕ್ಕೆ ಶುಭಕೋರಿ ಅಭಿಮಾನಿಗಳು ಹಾಕಿರುವ ಪೋಸ್ಟರ್ ನಲ್ಲಿ ಮುಂದಿನ ಸಿಎಂ ನಿರಾಣಿ ಎಂದು ಬರೆಯಲಾಗಿದೆ. ಆದರೆ ಈ ಬಗ್ಗೆ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.

ಯಾವುದೇ ಕಾರಣಕ್ಕ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಬಸವರಾಜ ಬೊಮ್ಮಾಯಿ ಅವರೇ ನಮ್ಮೆಲ್ಲರ ನೆಚ್ಚಿನ ಸಿಎಂ. ಬೊಮ್ಮಾಯಿ ಕಾರ್ಯವೈಖರಿಯಿಂದ ರಾಜ್ಯ ಅಭಿವೃದ್ಧಿಯತ್ತ ಸಾಗಿದೆ ಎಂದು ತಿಳಿಸಿದ್ದಾರೆ.

Key words: No –CM-change – Minister -Murugesh Nirani.