ದಪ್ಪಾ ಆಗಿದ್ದೀರಾ ಎಂದು ಟ್ರೋಲ್ ಮಾಡಿದವರಿಗೆ ಟಾಂಗ್ ಕೊಟ್ಟ ನಿತ್ಯಾ ಮೆನನ್

ಮುಂಬೈ, ಆಗಸ್ಟ್ 21, 2019 (www.justkannada.in): ತಮ್ಮನ್ನು ದಪ್ಪಾ ಆಗಿದ್ದೀರಾ ಎಂದು ಟ್ರೋಲ್ ಮಾಡುತ್ತಿದ್ದ ನೆಟ್ಟಿಗರಿಗೆ ನಟಿ ನಿತ್ಯಾ ಮೆನನ್ ಟಾಂಗ್ ನೀಡಿದ್ದಾರೆ.

ಹಾರ್ಮೋನ್ ಸಮಸ್ಯೆಯಿಂದ ಅಥವಾ ಮತ್ತಿತರ ಪ್ರಾಬ್ಲಂಗಳಿಂದ ತೂಕ ಹೆಚ್ಚಾಗುತ್ತದೆ. ಇದು ಹೆಚ್ಚು ನೋವು ನೀಡುತ್ತದೆ. ಆದರೆ, ಜನ ನಾವು ಸುಮ್ಮನೆ ತೂಕ ಹೆಚ್ಚಿಸಿಕೊಂಡಿದ್ದೇವೆಂದು ತಿಳಿದುಕೊಳ್ಳುತ್ತಾರೆ.

ಈ ಯೋಚನೆಯನ್ನೇ ಬದಲಿಸಬೇಕು. ಟ್ರೋಲ್ ಗಳನ್ನು ನೋಡಿದರೆ ಬೇಸರವಾಗುತ್ತದೆ ಎಂದು ನಿತ್ಯ ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದಾರೆ.