ಚೆನ್ನೈನಲ್ಲಿ ಬೀದಿ ವ್ಯಾಪಾರಿಯಿಂದ ತರಕಾರಿ ಖರೀದಿಸಿದ ನಿರ್ಮಲಾ ಸೀತಾರಾಮನ್: ವಿಡಿಯೋ ವೈರಲ್ !

ಬೆಂಗಳೂರು, ಅಕ್ಟೋಬರ್ 9, 2022 (www.justkannada.in): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಚೆನ್ನೈನ ಮೈಲಾಪುರ ಬೀದಿ ವ್ಯಾಪಾರಿಯಿಂದ ತರಕಾರಿಗಳನ್ನುಖರೀದಿಸುವ ವೀಡಿಯೊವನ್ನು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚೆನ್ನೈ ಭೇಟಿಯ ವೇಳೆ ವಿತ್ತ ಸಚಿವೆ ನಿರ್ಮಾಲಾ ಅವರು ಮೈಲಾಪುರ ಮಾರುಕಟ್ಟೆಗೆ ತೆರಳಿದ್ದಲ್ಲದೆ ಕೆಲವು ಮಾರಾಟಗಾರರು, ಗ್ರಾಹಕರೊಂದಿಗೆ ಮಾತನಾಡಿದ್ದರು.

ಭಾರತದಲ್ಲಿ ಹಣದುಬ್ಬರದಲ್ಲಿ ಒಳಪಟ್ಟಿರುವ ಪ್ರಮುಖ ವಸ್ತುಗಳಲ್ಲಿ ತರಕಾರಿ ಕೂಡ ಒಂದು. ಇದು ನಿರ್ಮಲಾ ಸೀತಾರಾಮನ್ ಅವರಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಒಂದಾಗಿದೆ.

ವೀಡಿಯೋದಲ್ಲಿ ಅವರು ಮಾರುಕಟ್ಟೆಯಲ್ಲಿ ಕೆಲವು ಸಿಹಿ ಗೆಣಸುಗಳನ್ನು ಆಯ್ದುಕೊಳ್ಳುತ್ತಿರುವುದು ಕಂಡುಬಂತು. ಜತೆಗೆ ಅದರ ದರದ ಕುರಿತು ವಿಚಾರಿಸುತ್ತಿದ್ದಾರೆ.