ಕೆಆರ್ ಪೇಟೆ ಅಭ್ಯರ್ಥಿ ಘೋಷಣೆ ವಿಚಾರ: ಸ್ಪಷ್ಟನೆ ಕೊಟ್ಟ ನಿಖಿಲ್ ಕುಮಾರಸ್ವಾಮಿ

ಮಂಡ್ಯ,ಫೆಬ್ರವರಿ,6,2026 (www.justkannada.in): ಕೆಆರ್ ಪೇಟೆ  ಅಭ್ಯರ್ಥಿ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ, ಇದು ಹಾದಿಬೀದಿಯಲ್ಲಿ ಚರ್ಚೆ ಮಾಡುವ ವಿಚಾರ ಅಲ್ಲ. ಅಂತಹ ಅನಿವಾರ್ಯ ಸೃಷ್ಠಿ ಆಗಿಲ್ಲ. ಕಾಮನ್ ಸೆನ್ಸ್ ಇರುವ ವ್ಯಕ್ತಿ ಹೇಗೆ ಮಾತಾಡಬೇಕೆಂದು ಅರಿಯಬೇಕು. ಕೆಆರ್ ಪೇಟೆ ಜೆಡಿಎಸ್ ಶಾಸಕರಾಗಿ ಮಂಜಣ್ಣ ಆಯ್ಕೆಯಾಗಿದ್ದಾರೆ. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಹಜವಾಗಿ  ಹೇಳಿದ್ದೆ ಅಷ್ಟೆ.  ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದರು.

ಮೈತ್ರಿ ಮೇಲ್ಮಟ್ಟದಲ್ಲಿ ಆಗಿದೆ.  ಹೆಚ್ ಡಿಕೆ ವ್ಯಕ್ತಿತ್ವ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ಕುಮಾರಸ್ವಾಮಿ ಮೇಲೆ ಗೂಬೆ ಕೂರಿಸುವುದು ಬೇಡ. ವಿಶ್ವಾಸದ ಕೊರತ ಇದ್ದರೆ ಹಾದಿ ಬಿದಿಯಲ್ಲಿ ಏಕೆ ಚರ್ಚೆ ಮಾಡುತ್ತೀರಿ.  ಮೈತ್ರಿ ಉಳಿಸಿಕೊಳ್ಳಬೇಕು ಅಂತಾ ಇದ್ದರೆ ಬನ್ನಿ ಹೆಚ್ ಡಿಕೆ ಮನೆ ಬಾಗಿಲು ಯಾವಾಗಲೂ ತೆರೆದಿರುತ್ತದೆ.  ಸಮಸ್ಯೆ ಇದ್ದರೆ ಸರಿಪಡಿಸುವ ಕೆಲಸ ಮಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ, ಮುಂದೆಯೂ  ಶಾಸಕ ಮಂಜು ಅವರ ಕೈ ಹಿಡಿಯಿರಿ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ಮುಖಂಡರಾದ ಮಾಜಿ ಶಾಸಕರಾದ ನಾರಾಯಣಗೌಡ,  ಪ್ರೀತಂ ಗೌಡ ಆಕ್ಷೇಪ ವ್ಯಕ್ತಪಡಿಸಿದ್ದರು.

Key words: KR Pete, candidate, issue, JDS, Nikhil Kumaraswamy