ಮುಂದಿನ ಸಿಎಂ ಹೇಳಿಕೆ ವಿಚಾರವಾಗಿ ಡಿಕೆಶಿ ಹಿರಿಯ ನಾಯಕರ ಸಭೆ ಕರೆಯಲಿ- ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಸಲಹೆ.

ಬೆಂಗಳೂರು,ಜೂನ್,22,2021(www.justkannada.in):  ಮುಂದಿನ ಸಿಎಂ ಬಗ್ಗೆ ಹೇಳಿಕೆ ನೀಡುತ್ತಿರುವ ಹಿನ್ನೆಲೆ ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಹಿರಿಯ ನಾಯಕರ ಸಭೆ ಕರೆದು ಚರ್ಚಿಸಲಿ ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಸಲಹೆ  ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ, ಸಿಎಂ ಅಭ್ಯರ್ಥಿ ಹೇಳಿಕೆ ವಿಚಾರವಾಗಿ ಹಿರಿಯ ನಾಯಕರ ಸಭೆ ಕರೆದರೆ ಚರ್ಚಿಸಿ ಸಮಸ್ಯೆ ಬಗೆಹರಿಸಬಹುದು. ಸಿಎಂ ಯಾರಾಗುತ್ತಾರೆಂಬುದು ಈಗ ಅಪ್ರಸ್ತುತ. ಹೇಳಿಕೆ ನೀಡದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೂಚನೆ ಕೊಟ್ಟಿದ್ದಾರೆ ಎಂದರು.

ಹೈಕಮಾಂಡ್ ಸೂಚನೆಯನ್ನು ಶಾಸಕ ಭೀಮಾನಾಯ್ಕ್ ಮತ್ತು ಗಣೇಶ್  ಉಲ್ಲಂಘನೆ ಮಾಡಿದ ವಿಚಾರ ಗಮನಕ್ಕೆ ಬಂದಿಲ್ಲ. ನಾಳೆಯಿಂದ ಈ ರೀತಿ ಹೇಳಿಕೆ ನೀಡಲ್ಲ. ಸಿದ್ಧರಾಮಯ್ಯ ಈ ಹೇಳಿಕೆಯನ್ನ ನೀಡಿಲ್ಲ. ಉಳಿದವರು ಹೇಳಿಕೆ ನೀಡಿದ್ದಾರೆ. ಈ ಬೆಳವಣಿಗೆ ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಕೆ.ಎಚ್ ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

Key words: next CM statement.- meeting – senior –  Former MP- KH Muniyappa