ಮೈಸೂರು,ಫೆಬ್ರವರಿ,27,2026 (www.justkannada.in): ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪದೇಪದೇ ಪ್ರಸ್ತಾಪ ವಿಚಾರ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಅವರವರ ಪಕ್ಷದ ವಿಚಾರ ಅವರು ಮಾತಾಡುತ್ತಾರೆ. ಎನ್ ಡಿಎ ತೀರ್ಮಾನವೇ ಅಂತಿಮ ಎಂದಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿಕೊಳ್ಳಬಾರದು. ಮೊದಲು ಚುನಾವಣೆ ಗೆಲ್ಲೋಣ. ನಂತರದಲ್ಲಿ ಯಾರು ಸಿಎಂ ತೀರ್ಮಾನಿಸೋಣ ಎಂದರು.
ಬಿಬಿಎಂಪಿ, ಸ್ಥಳೀಯ ಚುನಾವಣೆ ಹೊಂದಾಣಿಕೆ ವಿಚಾರ ಸಂಬಂಧ ಯಾವುದೇ ಮೈತ್ರಿಯ ತೀರ್ಮಾನವಾಗಿಲ್ಲ. ಎಲ್ಲವನ್ನೂ ಎನ್ ಡಿಎ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಆರ್.ಅಶೋಕ್ ತಿಳಿಸಿದರು.
ರಾಜ್ಯದಲ್ಲಿ ದೋಸ್ತಿ ಇದೆ. ಮುಂದೆಯೂ ಕೂಡ ದೋಸ್ತಿ ಮುಂದುವರಿಯಲಿದೆ. ಸಿಎಂ ಯಾರು ಎಂಬುದು ತೀರ್ಮಾನವಾಗಿಲ್ಲ. ಮುಂದೆ ಎನ್ ಡಿಎ ಎಲ್ಲವನ್ನೂ ತೀರ್ಮಾನಿಸಲಿದೆ ಎಂದು ಆರ್.ಅಶೋಕ್ ಹೇಳಿದರು.
Key words: Next CM, NDA, decision, final, R. Ashok







