ಬೆಂಗಳೂರು, ನ.೨೭,೨೦೨೫: ಬಾರ್ಕ್ ಸಂಸ್ಥೆಯಿಂದ ಪ್ರತಿ ಗುರುವಾರ ಬಿಡುಗಡೆಯಾಗುವ ನ್ಯೂಸ್ ಚಾನೆಲ್ಗಳ ಟಿಆರ್ಪಿ ಪಟ್ಟಿಯಲ್ಲಿ ನ್ಯೂಸ್18 ಕನ್ನಡ ನಂ.1 ಕನ್ನಡ ಸುದ್ದಿವಾಹಿನಿಯಾಗಿ ಹೊರಹೊಮ್ಮಿದೆ. ಇದರೊಂದಿಗೆ ಹತ್ತಿರಹತ್ತಿರ ಎರಡು ದಶಕಗಳ ಟಿವಿ9 ಅಧಿಪತ್ಯ ಕೊನೆಗೊಂಡಿದೆ. ಈ ಜಾಗದಲ್ಲೀಗ ನ್ಯೂಸ್18 ಕನ್ನಡ ಹೊಸದಾಗಿ ತಲೆ ಎತ್ತಿರುವ ಮಾರ್ಕೆಟ್ ಲೀಡರ್.
ಕಳೆದ ಒಂದೂವರೆ ವರ್ಷದಿಂದ ಗ್ರಾಮೀಣ ಕರ್ನಾಟಕ ಕೇಂದ್ರಿತ ಸುದ್ದಿಗಳತ್ತಲೇ ನಿರಂತರ ವರದಿಗಾರಿಕೆ ಮಾಡಿದ್ದ ನ್ಯೂಸ್18 ನಂ.1 ಆಗುವ ಪ್ರಯತ್ನದಲ್ಲಿ ಯಶ ಕಂಡಿದೆ. ಸರ್ಕಾರಿ ಶಾಲೆಗಳ ದುಸ್ಥಿತಿಯ ಕುರಿತು ವಿಶೇಷ ಅಭಿಯಾನ, ಧರ್ಮಸ್ಥಳ ಬುರುಡೆ ಪ್ರಕರಣದ ಸುತ್ತ ನಿಷ್ಪಕ್ಷಪಾತ ನಿರಂತರ ಕವರೇಜ್ ಸೇರಿದಂತೆ ಇತ್ತೀಚಿನ ಹಲವು ಮೆಗಾ ಕವರೇಜ್ಗಳು ಕನ್ನಡಿಗರ ಗಮನ ಸೆಳೆದು ಸದ್ದು ಮಾಡಿದ್ದವು. ಇಂದು ಬಿಡುಗಡೆಯಾದ ಬಾರ್ಕ್ನ ರೇಟಿಂಗ್ನಲ್ಲಿ ನ್ಯೂಸ್18 ಕನ್ನಡ ನಂ.1 ಆಗಿದೆ.

ಏನಿದು ಬಾರ್ಕ್ ರೇಟಿಂಗ್?
ಬಾರ್ಕ್, ಸುದ್ದಿವಾಹಿನಿಗಳ ಟಿಆರ್ಪಿ ಅಂಕಿ-ಅಂಶ ಬಿಡುಗಡೆ ಮಾಡುವ ಅಧಿಕೃತ ರೇಟಿಂಗ್ ಸಂಸ್ಥೆಯಾಗಿದ್ದು ಪ್ರತಿ ಗುರುವಾರ ದೇಶದ ಎಲ್ಲಾ ವಾಹಿನಿಗಳ ರೇಟಿಂಗ್ ಕೊಡುತ್ತದೆ. ಅದರಂತೆ ಇಂದು ಬಂದ ರೇಟಿಂಗ್ನಲ್ಲಿ ಕನ್ನಡ ನ್ಯೂಸ್ ಚಾನೆಲ್ಗಳ ಪೈಕಿ ನ್ಯೂಸ್18 ಕನ್ನಡ ನಂ.1 ಆಗಿದೆ.

ಸುಮಾರು ನಾಲ್ಕು ವಿಭಾಗಗಳ ಮೂಲಕ ಬಾರ್ಕ್ ಸಂಸ್ಥೆ ಚಾನೆಲ್ಗಳ ರೇಟಿಂಗ್ ಲೆಕ್ಕ ಹಾಕುತ್ತದೆ. ಕರ್ನಾಟಕ ರೂರಲ್, ಕರ್ನಾಟಕ ಅರ್ಬನ್, ಕರ್ನಾಟಕ ಬಿಲೋ 10 ಲ್ಯಾಕ್ ಮತ್ತು ಬೆಂಗಳೂರು ಅನ್ನೋದು ಈ ನಾಲ್ಕು ವಿಭಾಗಗಳು. ಈ ನಾಲ್ಕು ವಿಭಾಗಗಳಲ್ಲೂ ಯಾವ ಸುದ್ದಿವಾಹಿನಿ ಎಷ್ಟು ಮಾರ್ಕೆಟ್ ಶೇರ್ ಪಡೆದಿದೆ ಅನ್ನೋದರ ಸರಾಸರಿ ಅಂಕಿಅಂಶಗಳೊಂದಿಗೆ ಯಾವ ವಾಹಿನಿ ಯಾವ ಸ್ಥಾನದಲ್ಲಿದೆ ಎಂದು ನಿರ್ಧರಿಸಲಾಗುತ್ತದೆ. ಇದರಲ್ಲಿ ಈ ವಾರ 25.3% ಮೂಲಕ ಗ್ರಾಮೀಣ ಕರ್ನಾಟಕದಲ್ಲಿ ಮತ್ತು 27% ಮೂಲಕ ಅರ್ಬನ್ ಏರಿಯಾದಲ್ಲಿ 29.2% ಮೂಲಕ ಅರ್ಬನ್ 10ಲಕ್ಷ ಏರಿಯಾದಲ್ಲಿ ನ್ಯೂಸ್18 ಕನ್ನಡ ನಂ.1 ಸ್ಥಾನದಲ್ಲಿದೆ. ಇದರೊಂದಿಗೆ ಒಟ್ಟಾರೆ ಕರ್ನಾಟಕದ ರೀಚ್ ಮತ್ತು ರೇಟಿಂಗ್ ನಲ್ಲಿ ನ್ಯೂಸ್18 ಟಿವಿ9 ಅನ್ನು ಹಿಂದಿಕ್ಕಿ ನಂ.1 ಪಟ್ಟ ಗಳಿಸಿದೆ. ಉಳಿದಂತೆ ಮೂರನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ, ನಾಲ್ಕನೇ ಸ್ಥಾನದಲ್ಲಿ ಸುವರ್ಣ ನ್ಯೂಸ್ ಮತ್ತು ಇತರ ಚಾನೆಲ್ಗಳು ನಂತರದ ಸ್ಥಾನಗಳಲ್ಲಿವೆ.
ಈ ವಿಶೇಷ ಮೈಲುಗಲ್ಲಿನ ಹಿನ್ನೆಲೆಯಲ್ಲಿ ನ್ಯೂಸ್18 ಕನ್ನಡ ಕಚೇರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಸಂಭ್ರಮಾಚರಣೆ ಮಾಡಿ ಕನ್ನಡಿಗರಿಗೆ ಧನ್ಯವಾದ ಸಮರ್ಪಿಸಲಾಯ್ತು. ನ್ಯೂಸ್18 ಕನ್ನಡ ಸಂಪಾದಕರಾದ ಹರಿಪ್ರಸಾದ್, ನೆಟ್ವರ್ಕ್ 18ನ ಸೌತ್ ಎಡಿಟೋರಿಯಲ್ ಅಡ್ವೆಸರ್ ಡಿ.ಪಿ. ಸತೀಶ್, ಎಡಿಟರ್ ಔಟ್ಪುಟ್ ಮಧು ಎಂ ಉತ್ತುವಳ್ಳಿ, ಇನ್ ಪುಟ್ ಹೆಡ್ ವೀರೇಶ್ ಅಂಗಡಿ, ಪ್ರೊಡಕ್ಷನ್ ಹೆಡ್ ಸ್ವರೂಪ್, ಪೊಲಿಟಿಕಲ್ ಬ್ಯೂರೋ ಹೆಡ್ ಚಿದಾನಂದ ಪಟೇಲ್, ಪ್ರೋಗ್ರಾಂ ಹೆಡ್ ಶೇಖರ್ ಪೂಜಾರಿ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗ ಈ ವಿಶೇಷ ಕ್ಷಣದಲ್ಲಿ ಭಾಗಿಯಾದ್ದರು.
KEY WORDS: “News18 Kannada”, emerged, number one news channel

SUMMARY:
“News18 Kannada” has emerged as the number one news channel.

News18 Kannada has emerged as the No.1 Kannada news channel in the TRP list of news channels released every Thursday by BARC. With this, TV9’s dominance of nearly two decades has come to an end. News18 Kannada is now the newly emerged market leader in this space.






