‘‘ಬ್ಯಾನ್ ಜಗ್ಗೇಶ್’’ ಅಭಿಯಾನ ಶುರು ಮಾಡಿದ ಯಶ್ ಫ್ಯಾನ್ಸ್ !

Promotion

ಬೆಂಗಳೂರು, ನವೆಂಬರ್ 26, 2020 (www.justkannada.in): ನವರಸನಾಯಕ ಜಗ್ಗೇಶ್ ವಿರುದ್ಧ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ!

ಪ್ಯಾನ್ ಇಂಡಿಯಾ ಸಿನಿಮಾ ವಿರುದ್ದ ಧ್ವನಿಯೆತ್ತಿದ್ದಕ್ಕೆ ಜಗ್ಗೇಶ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕೆಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ಯಾನ್ ಇಂಡಿಯಾದಿಂದ ಕನ್ನಡ ಚಿತ್ರರಂಗ ಉದ್ಧಾರವಾಗಲ್ಲ ಎಂದು ಜಗ್ಗೇಶ್ ಮಾಧ‍್ಯಮಗಳಿಗೆ ಹೇಳಿಕೆ ನೀಡಿದ್ದರು. ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.

ಜಗ್ಗೇಶ್ ವಿರುದ್ಧ ‘ಬ್ಯಾನ್ ಜಗ್ಗೇಶ್’ ಅಭಿಯಾನವನ್ನೇ ಆರಂಭಿಸಿದ್ದಾರೆ. ಒಬ್ರು ಬೆಳಿತಾರೆ ಎಂದರೆ ಹೊಟ್ಟೆ ಉರಿದುಕೊಳ್ಳುವ ಸೀನಿಯರ್ ನಟ. ಕನ್ನಡ ಚಿತ್ರರಂಗ ನಿಮ್ಮಿಂದ ಉದ್ಧಾರವಂತೂ ಆಗಿಲ್ಲ, ಹಾಳು ಮಾಡಬೇಡಿ ಎಂದು ಯಶ್ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.