ಇಂದು ಸಂಜೆವರೆಗೆ ಕಾಯುತ್ತೇವೆ: ನಾಳೆ ಅಗತ್ಯ ಕ್ರಮ- ಬಿಎಂಟಿಸಿ ಎಂಡಿ ಶಿಖಾ ಹೇಳಿಕೆ…

Promotion

ಬೆಂಗಳೂರು,ಡಿಸೆಂಬರ್,12,2020(www.justkannada.in): ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಹೂಡಿರುವ ಹಿನ್ನೆಲೆ ಇಂದು ಸಂಜೆವರೆಗೆ ಕಾಯುತ್ತೇವೆ. ಕರ್ತವ್ಯಕ್ಕೆ ಹಾಜರಾಗದಿದ್ದರೇ ನಾಳೆ ಅಗತ್ಯಕ್ರಮ ಕೈಗೊಳ್ಳುತ್ತೇವೆ ಎಂದು ಬಿಎಂಟಿಸಿ ಎಂಡಿ ಶಿಖಾ ಅವರು ತಿಳಿಸಿದ್ದಾರೆ.logo-justkannada-mysore

ಸಾರಿಗೆ ನೌಕರರ ಮುಷ್ಕರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಎಂಟಿಸಿ ಎಂಡಿ ಶಿಖಾ, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಯಾವತ್ತೂ ಕೂಡ ನಾವು ಚರ್ಚೆಗೆ ಸಿದ್ಧರಿದ್ದೇವೆ. ಸಾರಿಗೆ ನೌಕರರ ಸಂಘದವರೇ ಚರ್ಚೆಗೆ ಬರಲಿ ಎಂದು ಹೇಳಿದರು.waiting-until-this-evening-action-tomorrow-bmtc-md-shikha

ಹಾಗೆಯೇ ಸಾರ್ವಜನಿಕರಿಗೆ ತೊಂದರೇ ನೀಡದೇ ಕೆಲಸಕ್ಕೆ ಹಾಜರಾಗಿ ಎಂದು ಮನವಿ ಮಾಡಿದ  ಶಿಖಾ ಅವರು,  ಇಂದು ಸಂಜೆವರೆಗೆ ಕಾಯುತ್ತೇವೆ. ಕರ್ತವ್ಯಕ್ಕೆ ಹಾಜರಾಗದಿದ್ದರೇ ನಾಳೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Key words: Waiting -until -this evening-action- tomorrow-BMTC MD -Shikha