ದೇಶಪ್ರೇಮ ಎಂದರೆ ಬಿಜೆಪಿ ಪಕ್ಷ ಬೆಂಬಲಿಸುವುದು ಎನ್ನುವಂತಹ ವಾತಾವರಣ ನಿರ್ಮಿಸಲಾಗುತ್ತಿದೆ : ಡಾ.ಎಚ್.ಸಿ.ಮಹಾದೇವಪ್ಪ ಬೇಸರ

Promotion

ಬೆಂಗಳೂರು,ಡಿಸೆಂಬರ್,16,2020(www.justkannada.in) : ದೇಶಪ್ರೇಮ ಎಂಬ ಮಹತ್ತರ ಅಂಶವನ್ನು ಯಾವುದೋ ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ನೀಡುವ ಬೆಂಬಲ ಎಂಬಂತೆ ಸೀಮಿತಗೊಳಿಸಿ ನೋಡಲಾಗುತ್ತಿದೆ. ಈ ವಿಷಕಾರಿ ಕೋಮುವಾದಿಗಳ ಹಾವಳಿಯಲ್ಲಿ ದೇಶಪ್ರೇಮದ ನಿಜವಾದ ವ್ಯಾಖ್ಯಾನವೇ ಮರೆಯಾಗುತ್ತಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಬೇಸರವ್ಯಕ್ತಪಡಿಸಿದ್ದಾರೆ.

I didn't knew CM BSY will think so cheaply - KPCC President D.K. Shivakumar

ಈ ಹೊತ್ತು ದೇಶಪ್ರೇಮ ಎಂದರೆ ಬಿಜೆಪಿ ಪಕ್ಷವನ್ನು ಬೆಂಬಲಿಸುವುದು ಎನ್ನುವಂತಹ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಇನ್ನು ಬಿಜೆಪಿ ಪಕ್ಷವನ್ನು ಬೆಂಬಲಿಸದೇ ಇರುವಂತವರನ್ನು ನೀರು ಕುಡಿದಷ್ಟೇ ಸುಲಭವಾಗಿ ದೇಶದ್ರೋಹಿಗಳು ಎನ್ನುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈಗೀಗ ಬಹುತೇಕ ಮಾಧ್ಯಮಗಳೂ ಸಹ ತಮ್ಮ ಜವಾಬ್ದಾರಿಯನ್ನು ಮರೆತು ಇಂತಹ ಹುಸಿ ದೇಶಪ್ರೇಮದ ಬೀಜಗಳನ್ನು ಬಿತ್ತುತ್ತಿವೆ.

true-definition-patriotism-fading-Former-Minister-Dr.H.C. Mahadevappa-bored

ಬಾಬಾ ಸಾಹೇಬರಂತಹ ಮಹಾತ್ಮರು ಹುಟ್ಟಿ ಬೆಳೆದು ಜ್ಞಾನ ಮಾರ್ಗದಲ್ಲಿ ಕಟ್ಟಲು ಯತ್ನಿಸಿದ ಭಾರತದ ಅಂತರಂಗವು ಇಷ್ಟೊಂದು ಕುಸಿಯಿತಲ್ಲ ಎಂದು ನೆನೆದರೆ ಬೇಸರವಾಗುತ್ತದೆ ಎಂದು ಡಾ.ಎಚ್.ಸಿ.ಮಹಾದೇವಪ್ಪ ಟ್ವೀಟ್ ಮೂಲಕ ವಿಷಾದವ್ಯಕ್ತಪಡಿಸಿದ್ದಾರೆ.

key words : true-definition-patriotism-fading-Former-Minister-Dr.H.C. Mahadevappa-bored