ವಿವಿಧ ರೈಲುಗಳ ಸಂಚಾರ ರದ್ದು

Promotion

ಹುಬ್ಬಳ್ಳಿ:ಮೇ-3: ನೈಋತ್ಯ ರೈಲ್ವೆಯ ಬೆಂಗಳೂರು ಡಿವಿಜನ್‌ನ ಬೈಯಪ್ಪನಹಳ್ಳಿಯಲ್ಲಿ ಯಾರ್ಡ್‌ ನವೀಕರಣ ಕಾರ್ಯ ಪ್ರಯುಕ್ತ ಕೆಲ ರೈಲುಗಳ ಸೇವೆಯನ್ನು ಸಂಪೂರ್ಣ ಹಾಗೂ ಇನ್ನೂ ಕೆಲ ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ.
ಮೇ 4ರಿಂದ 31ರವರೆಗೆ ಬೆಂಗಳೂರು ಕಂಟೋನ್ಮೆಂಟ್-ವಿಜಯವಾಡ (56503/56504) ಪ್ಯಾಸೆಂಜರ್‌ ರೈಲು ಸೇವೆಯನ್ನು ರದ್ದುಪಡಿಸಲಾಗಿದೆ. ಅದೇ ರೀತಿ, ಮೇ 4ರಿಂದ 31ರವರೆಗೆ ಬಾಣಸವಾಡಿ-ಹೊಸೂರು (06571/06572) ಪ್ಯಾಸೆಂಜರ್‌ ರೈಲು ಸೇವೆಯನ್ನು ರದ್ದು ಮಾಡಲಾಗಿದೆ. ಮೇ 4ರಿಂದ 31ರವರೆಗೆಬಾಣಸವಾಡಿ-ಹೊಸೂರು (06573/06574) ಪ್ಯಾಸೆಂಜರ್‌ ರೈಲು; ಮೇ 4ರಿಂದ 31ರವರೆಗೆ ವೈಟ್ಫೀಲ್ಡ್- ಬಾಣಸವಾಡಿ (06577/06578) ಪ್ಯಾಸೆಂಜರ್‌ ರೈಲು ಸೇವೆಯನ್ನು ರದ್ದುಪಡಿಸಲಾಗಿದೆ.

ಭಾಗಶಃ ರದ್ದು: ಮೇ 4ರ ನಂತರ ಬೆಂಗಳೂರು ನಗರ-ಆರಕ್ಕೋಣಂ (56262) ಪ್ಯಾಸೆಂಜರ್‌ ರೈಲು ಸೇವೆಯನ್ನು ಜೋಲಾರಪೆಟ್ಟೈ ಹಾಗೂ ಆರಕ್ಕೋಣಂ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ. ರೈಲು ಬೆಂಗಳೂರು ನಗರದಿಂದ ಜೋಲಾರಪೆಟ್ಟೈವರೆಗೆ ಮಾತ್ರ ಚಲಿಸುವುದು. ಅದೇ ರೀತಿ, ಮೇ 5ರ ನಂತರ ಆರಕ್ಕೋಣಂ-ಬೆಂಗಳೂರು ನಗರ (56261) ಪ್ಯಾಸೆಂಜರ್‌ ರೈಲು ಸಂಚಾರವನ್ನು ಆರಕ್ಕೋಣಂ ಹಾಗೂ ಜೋಲಾರಪೆಟ್ಟೈ ಮಧ್ಯೆ ಭಾಗಶಃ ರದ್ದುಗೊಳಿಸಲಾಗಿದೆ.

ಮೇ 8, 15, 22 ಹಾಗೂ ಮೇ 29ರಂದು ಸಂಬಲ್ಪುರ-ಬಾಣಸವಾಡಿ (08301) ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಕೃಷ್ಣರಾಜಪುರಂ-ಬಾಣಸವಾಡಿ ಮಧ್ಯೆ ರದ್ದುಪಡಿಸಲಾಗಿದೆ. ಆದ್ದರಿಂದ ರೈಲು ಕೃಷ್ಣರಾಜಪುರಂವರೆಗೆ ಮಾತ್ರ ಸಾಗಲಿದೆ. ಅದೇ ರೀತಿ, ಮೇ 9, 16, 23 ಹಾಗೂ ಮೇ 30ರಂದು ಬಾಣಸವಾಡಿಯಿಂದ ಕೃಷ್ಣರಾಜಪುರಂವರೆಗೆ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇದರಿಂದ ರೈಲು ಕೃಷ್ಣರಾಜಪುರಂನಿಂದ ಸಂಚಾರ ಆರಂಭಿಸುವುದು. ‘ಫೋನಿ’ ಚಂಡಮಾರುತ ಕಾರಣದಿಂದ ಮೇ 6ರಂದು ಮುಜಫರ್‌ನಗರದಿಂದ ಹೊರಡುವ ಮುಜಫರ್‌ನಗರ-ಯಶವಂತಪುರ (15228) ರೈಲು ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಕೃಪೆ: ಉದಯವಾಣಿ

ವಿವಿಧ ರೈಲುಗಳ ಸಂಚಾರ ರದ್ದು
trains-canceled