ಇಂದು ರಾಯಲ್ ಚಾಲೆಂಜರ್ಸ್-ಸನ್ ರೈಸರ್ಸ್ ಹೈವೋಲ್ಟೇಜ್ ಪಂದ್ಯ

Promotion

ಬೆಂಗಳೂರು, ಮೇ 08, 2022 (www.justkannada.in): ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಇಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿನಡೆಯುವ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ಎರಡೂ ತಂಡಗಳಿಗೂ ಪ್ರಮುಖವಾಗಿದೆ.

ಈ ಹಿಂದಿನ ಪಂದ್ಯದಲ್ಲಿ ಆರ್.ಎಸ್.ಬಿ. ಸನ್ ರೈಸರ್ಸ್ ವಿರುದ್ಧ ಸೋಲು ಕಂಡಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೇಡುತೀರಿಸಿಕೊಳ್ಳಲು ಆರ್.ಸಿ.ಬಿ. ಕಾರ್ಯತಂತ್ರ ರೂಪಿಸಿದೆ.

ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಸದೃಢವಾಗಿರುವ ಆರ್.ಸಿ.ಬಿ. ಇಂದು ಹಸಿರು ಬಣ್ಣದ ಜರ್ಸಿ ಧರಿಸಿ ಆಡಲಿದ್ದಾರೆ. ಗೋಗ್ರೀನ್ ಸ್ವಚ್ಛ ಹಾಗೂ ಸುಂದರ ಪರಿಸರದ ಗುರಿಯೊಂದಿಗೆ ಕಣಕ್ಕಿಳಿಯಲಿದ್ದಾರೆ.