Bishop Cotton ಆಡಳಿತ ಮಂಡಳಿಯಿಂದ ಹತ್ತಾರು ಕೋಟಿ ರೂ. ಆಸ್ತಿ ತೆರಿಗೆ ವಸೂಲಿ ಮಾಡುವಂತೆ : ಬಿಜೆಪಿ ಘಟಕ ಅಧ್ಯಕ್ಷ  ಎನ್. ಆರ್.ರಮೇಶ್ ಆಗ್ರಹ

ಬೆಂಗಳೂರು, 29 ಅಕ್ಟೋಬರ್ 2020 (www.justkannada.in): Bishop Cotton ಆಡಳಿತ ಮಂಡಳಿಯು 2008 ರಿಂದ ಈವರೆವಿಗೆ ಪಾವತಿಸಬೇಕಿರುವ ಹತ್ತಾರು ಕೋಟಿ ರೂಪಾಯಿ ಆಸ್ತಿ ತೆರಿಗೆ ವಸೂಲಿ ಮಾಡಬೇಕು  ಎಂದು ಪಾಲಿಕೆಯ ಆಡಳಿತಾಧಿಕಾರಿಗಳು, ಆಯುಕ್ತರು ಮತ್ತು ಕಂದಾಯ ವಿಭಾಗದ ವಿಶೇಷ ಆಯುಕ್ತರನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ  ಎನ್. ಆರ್.ರಮೇಶ್ ಆಗ್ರಹಿಸಿದ್ದಾರೆ.jk-logo-justkannada-logo

ಕನಿಷ್ಠ 2017-18 ರಿಂದ 2020-21 ರವರೆಗಿನ ಅವಧಿಗೆ ಮಾತ್ರವೇ ಸದರಿ ಸಂಸ್ಥೆಯು ಬಾಕಿ ಉಳಿಸಿಕೊಂಡಿರುವ  1,25,16,240/- (ಒಂದು ಕೋಟಿ ಇಪ್ಪತ್ತೈದು ಲಕ್ಷದ ಹದಿನಾರು ಸಾವಿರದ ಎರಡು ನೂರಾ ನಲವತ್ತು) ಗಳಷ್ಟು ಮೊತ್ತದ “ಆಸ್ತಿ ತೆರಿಗೆ”ಯನ್ನು ಪಾಲಿಕೆಯ ನಿಯಮಾವಳಿಗಳಂತೆ ಬಡ್ಡಿ ಸಹಿತವಾಗಿ ವಸೂಲಿ ಮಾಡುವ ಸಂಬಂಧ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

2008-09 ರಿಂದ 2016-17 ರವರೆಗೆ ಸದರಿ ಸ್ವತ್ತಿಗೆ “ಆಸ್ತಿ ತೆರಿಗೆ”ಯನ್ನೇ ವಸೂಲಿ ಮಾಡದೇ ಮತ್ತು ಆಸ್ತಿ ತೆರಿಗೆಯ Demand Notice ಗಳನ್ನೂ ಸಹ ನೀಡದೇ ದೊಡ್ಡ ಮಟ್ಟದ ಕರ್ತವ್ಯ ಲೋಪ ಎಸಗಿರುವ ಹಾಗೂ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡಿರುವ ಕೆಂಪೇಗೌಡನಗರ ಉಪ ವಿಭಾಗದ ಕಂದಾಯ ಅಧಿಕಾರಿಗಳು, ಚಿಕ್ಕಪೇಟೆ ವಿಭಾಗದ ಕಂದಾಯ ಅಧಿಕಾರಿಗಳು ಮತ್ತು ವಾರ್ಡ್ – 118 ರ ಕಂದಾಯ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಎನ್. ಆರ್.ರಮೇಶ್ ಒತ್ತಾಯಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಛೇರಿಗೆ ಹೊಂದಿಕೊಂಡಂತೆಯೇ ಇರುವ CSI (Church of South India) ಎಂಬ ಹೆಸರಿನಲ್ಲಿರುವ 27 ಎಕರೆ ವಿಸ್ತೀರ್ಣದ 19/1 ರ ಸಂಖ್ಯೆಯ ಸ್ವತ್ತಿನ ಪೈಕಿ ಸುಮಾರು 04 ಎಕರೆಗಳಷ್ಟು ವಿಸ್ತೀರ್ಣದಲ್ಲಿರುವ ಸ್ವತ್ತಿನ ಸಂಖ್ಯೆ 19/1-1 ರಲ್ಲಿ ಇರುವಂತಹ Bishop Cotton ಪದವಿ ಕಾಲೇಜು ಮತ್ತು ಕಾನೂನು ಕಾಲೇಜುಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಳೆದ 12 ವರ್ಷಗಳಿಂದಲೂ ಆಸ್ತಿ ತೆರಿಗೆಯನ್ನೇ ಪಾವತಿ ಮಾಡದಿರುವ ಅಂಶ ಬೆಳಕಿಗೆ ಬಂದಿದೆ.

2008-09 ರಿಂದ 2016-17 ರವರೆಗೆ ಕೇವಲ ಶೇ. 25 ರಷ್ಟು ಸೇವಾ ತೆರಿಗೆಯನ್ನು ಮಾತ್ರವೇ ಪಾವತಿಸಿರುವ Bishop Cotton ಕಾಲೇಜು ಆಡಳಿತ ಮಂಡಳಿಯು 2017-18 ರಿಂದ ಈವರೆವಿಗೆ ಸೇವಾ ತೆರಿಗೆಯನ್ನೂ ಸಹ ಪಾವತಿಸಿರುವುದಿಲ್ಲ. 04 ಎಕರೆಗಳಷ್ಟು ವಿಸ್ತೀರ್ಣದ ಈ ಸ್ವತ್ತಿನಲ್ಲಿ ಸುಮಾರು 96,070 ಚ. ಅಡಿಗಳಷ್ಟು ವಿಸ್ತೀರ್ಣದ ಕಾಲೇಜು ಕಟ್ಟಡವು ಇರುತ್ತದೆ. ಈಗಾಗಲೇ ಖಾಸಗಿ ಶಾಲಾ ಕಾಲೇಜು ಕಟ್ಟಡಗಳನ್ನು ವಾಣಿಜ್ಯ ಕಟ್ಟಡಗಳು ಎಂದು ಪರಿಗಣಿಸಲ್ಪಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

‘A’ Zone ವ್ಯಾಪ್ತಿಯಲ್ಲಿರುವ ಈ ಕಾಲೇಜಿನ 96,070 ಚ. ಅಡಿಗಳಷ್ಟು ವಿಸ್ತೀರ್ಣದ ಒಟ್ಟು ನಿರ್ಮಿತ ಪ್ರದೇಶಕ್ಕೆ ಪಾಲಿಕೆಯು ವಾಣಿಜ್ಯ ಕಟ್ಟಡಗಳಿಗೆ ನಿಗದಿಪಡಿಸಿರುವಂತೆ ವಾರ್ಷಿಕವಾಗಿ ಪ್ರತಿಯೊಂದು ಚ. ಅಡಿ ವಿಸ್ತೀರ್ಣದ ಕಟ್ಟಡಕ್ಕೆ  12.50/- ಗಳಂತೆ ಒಟ್ಟು  31,29,060/- (ಮೂವತ್ತೊಂದು ಲಕ್ಷದ ಇಪ್ಪತ್ತೊಂಬತ್ತು ಸಾವಿರದ ಆರವತ್ತು) ಗಳಷ್ಟು ಮೊತ್ತದ ವಾರ್ಷಿಕ ಆಸ್ತಿ ತೆರಿಗೆಯನ್ನು ಪಾಲಿಕೆಗೆ ಸದರಿ ಸ್ವತ್ತಿಗೆ ಪಾವತಿಸಬೇಕಿರುತ್ತದೆ.

2008-09 ರಿಂದ 2016-17 ರವರೆಗೆ ಶೇ. 25 ರಷ್ಟು ಸೇವಾ ತೆರಿಗೆಯನ್ನು ಮಾತ್ರವೇ ಪಾವತಿಸಿರುವ Bishop Cotton ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯು ಈವರೆವಿಗೆ ಆಸ್ತಿ ತೆರಿಗೆಯನ್ನೇ ಪಾವತಿಸದೇ ಪಾಲಿಕೆಗೆ ಹತ್ತಾರು ಕೋಟಿ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೇವಲ 2017-18 ರಿಂದ 2020-21 ರವರೆಗಿನ 04 ವರ್ಷಗಳ ಅವಧಿಗೆ ಮಾತ್ರವೇ ಒಟ್ಟು  1,25,16,240/- (ಒಂದು ಕೋಟಿ ಇಪ್ಪತ್ತೈದು ಲಕ್ಷದ ಹದಿನಾರು ಸಾವಿರದ ಎರಡು ನೂರಾ ನಲವತ್ತು) ರೂಪಾಯಿಗಳಷ್ಟು ಬೃಹತ್ ಮೊತ್ತದ ಆಸ್ತಿ ತೆರಿಗೆಯನ್ನು ಈ ಸಂಸ್ಥೆಯು ಪಾಲಿಕೆಗೆ ಪಾವತಿಸಬೇಕಿರುತ್ತದೆ.

ವಿದ್ಯಾರ್ಥಿಗಳಿಂದ ವಾರ್ಷಿಕವಾಗಿ ಲಕ್ಷಾಂತರ ರೂ. ಶುಲ್ಕ ವಸೂಲಿ

ಸಾವಿರಾರು ವಿದ್ಯಾರ್ಥಿಗಳನ್ನು ಹೊಂದಿರುವ Bishop Cotton Womens Christian College ಮತ್ತು Bishop Cotton Law College ಆಡಳಿತ ಮಂಡಳಿಯು ಪ್ರತಿಯೊಬ್ಬ ವಿದ್ಯಾರ್ಥಿಯಿಂದ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳಷ್ಟು ವಾರ್ಷಿಕ ಶುಲ್ಕವನ್ನು ವಸೂಲಿ ಮಾಡುತ್ತಿದ್ದರೂ ಸಹ ಸದರಿ ಆಡಳಿತ ಮಂಡಳಿಯವರು “ಆಸ್ತಿ ತೆರಿಗೆ ರಿಯಾಯಿತಿ”ಯನ್ನು ಕೇಳಿರುತ್ತಾರೆ.

ಆಸ್ತಿ ತೆರಿಗೆ ರಿಯಾಯಿತಿ ನೀಡುವುದು ಸರಿಯಲ್ಲ

Tens-millions-rupees-Bishop-Cotton's-governing-body-Asset- tax-deduction-BJP-unit-president-N.R.Ramesh

ಸರ್ಕಾರಿ ಅನುದಾನಿತ ಶಾಲಾ ಕಾಲೇಜುಗಳಿಗೇ “ಆಸ್ತಿ ತೆರಿಗೆ ರಿಯಾಯಿತಿ” ನೀಡದ ಪಾಲಿಕೆಯು ಇಂತಹ ದೊಡ್ಡ ಮಟ್ಟದ ವಾಣಿಜ್ಯ ಉದ್ದೇಶಿತ ಕಾಲೇಜುಗಳಿಗೆ “ಆಸ್ತಿ ತೆರಿಗೆ ರಿಯಾಯಿತಿ” ನೀಡುವುದು ಸರಿಯಲ್ಲ. ಹಾಗಾಗಿ, ಅತ್ಯಂತ ಪ್ರಭಾವಶಾಲಿ ಶಿಕ್ಷಣ ಸಂಸ್ಥೆಯಾಗಿರುವ Bishop Cotton ಕಾಲೇಜಿಗೆ ಪಾಲಿಕೆಯು “ಆಸ್ತಿ ತೆರಿಗೆ ರಿಯಾಯಿತಿ” ನೀಡಿದ್ದೇ ಆದಲ್ಲಿ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಇಂತಹುದೇ ನೂರಾರು ಖಾಸಗಿ ಶಿಕ್ಷಣ ಸಂಸ್ಥೆಗಳೂ ಸಹ “ಆಸ್ತಿ ತೆರಿಗೆ ರಿಯಾಯಿತಿ” ಕೋರಿ ಅರ್ಜಿ ಸಲ್ಲಿಸಬಹುದು ಅಥವಾ ತಮ್ಮ ಶಿಕ್ಷಣ ಸಂಸ್ಥೆಗಳಿಗೂ “ಆಸ್ತಿ ತೆರಿಗೆ ರಿಯಾಯಿತಿ” ನೀಡುವಂತೆ ಪಾಲಿಕೆಗೆ ಆದೇಶಿಸುವಂತೆ ಕೋರಿ ನ್ಯಾಯಾಲಯಗಳ ಮೆಟ್ಟಿಲೇರಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ.

key words :Tens-millions-rupees-Bishop-Cotton’s-governing-body-Asset- tax-deduction-BJP-unit-president-N.R.Ramesh