ದೇವಾಲಯಕ್ಕೆ ಕನ್ನ ಹಾಕಿ ಮೂವರನ್ನ ಹತ್ಯೆಗೈದ ದರೋಡೆಕೋರರು…

Promotion

ಮಂಡ್ಯ, ಸೆಪ್ಟೆಂಬರ್, 11,2020(www.justkannada.in) : ಮಂಡ್ಯದ ಅರ್ಕೇಶ್ವರ ದೇವಾಲಯಕ್ಕೆ ಕನ್ನ ಹಾಕಿದ ದರೋಡೆಕೋರರು ಅಲ್ಲಿ ಮಲಗಿದ್ದ  ಅರ್ಚಕ, ಸೆಕ್ಯೂರಿಟಿ ಸೇರಿ ಮೂವರನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ.

jk-logo-justkannada-logo

ಮಂಡ್ಯದ ಅತಿ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಗುತ್ತಲು ಅರ್ಕೇಶ್ವರ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಮೂವರನ್ನು ಕಗ್ಗೊಲೆ ಮಾಡಿ ಹಣದ ಹುಂಡಿಯನ್ನು ದೋಚಲಾಗಿದೆ.

: temple-robbery-High-priest-guards-assassinated-gangsters

ದರೋಡೆಕೋರರು ದೇವಾಲಯಕ್ಕೆ ನುಗ್ಗಿ ದೇವಾಲಯದ ಹುಂಡಿಯನ್ನು ಹೊತ್ತೊಯ್ಯುವ ಸಂದರ್ಭದಲ್ಲಿ ಅರ್ಚಕ ಹಾಗೂ ಕಾವಲುಗಾರರಾದ ಗಣೇಶ, ಪ್ರಕಾಶ, ಆನಂದ  ಮೂವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಬಳಿಕ ದರೋಡೆಕೋರರು ದೇವಾಲಯದ ಹುಂಡಿ ಹೊತ್ತೊಯ್ದು ದೇವಾಲಯದ ಹೊರಗೆ ಬಿಸಾಡಿ ಪರಾರಿಯಾಗಿದ್ದಾರೆ.

ಈ ಕುರಿತು ಮಂಡ್ಯ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

key words : temple-robbery-High-priest-guards-assassinated-gangsters