ವಿವಾದಿತ ಸುತ್ತೋಲೆ ವಾಪಸ್ ಪಡೆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

Promotion

ಬೆಂಗಳೂರು, ಜನವರಿ 30, 2022 (www.justkannada.in): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ್ದ ವಿವಾದಿತ ಸುತ್ತೋಲೆ ವಾಪಸ್ ಪಡೆದಿದೆ.

ಗರ್ಭಿಣಿಯರು ಕೆಲಸಕ್ಕೆ ಅಸಮರ್ಥ ಎನ್ನುವ ರೀತಿ ಹೊರಡಿಸಿದ್ದ ಸುತ್ತೋಲೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿತ್ತು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ವಿವಾದಿತ ಸುತ್ತೋಲೆ ವಾಪಸ್ ಪಡೆದಿದೆ.

ಗರ್ಭಿಣಿಯರು ಕೆಲಸಕ್ಕೆ ಅಸಮರ್ಥ ಎನ್ನುವ ರೀತಿ ಹೊರಡಿಸಿದ್ದ ಸುತ್ತೋಲೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾಪಸ್ ಪಡೆದುಕೊಂಡಿದೆ.

ಗರ್ಭಿಣಿಯಾಗಿ ಮೂರು ತಿಂಗಳಾದ ಮಹಿಳೆಯರು ಕರ್ತವ್ಯ ನಿರ್ವಹಣೆಗೆ ತಾತ್ಕಾಲಿಕವಾಗಿ ಅರ್ಹರಲ್ಲ ಎನ್ನುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸುತ್ತೋಲೆ ಹೊರಡಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು.