ಬೆಂಗಳೂರು ಕಾಶ್ಮೀರ ಭವನದಲ್ಲಿ ಶಾರದೆಗೆ ವಿಶೇಷ ಪೂಜೆ.

ಬೆಂಗಳೂರು, ಜನವರಿ 27,2023(www.justkannada.in): ಕಾಶ್ಮೀರದ ‘ಸೇವ್ ಶಾರದಾ ಕಮಿಟಿ’ (ಶಾರದೆಯನ್ನು ರಕ್ಷಿಸಿ ಸಮಿತಿ) ವತಿಯಿಂದ, ಕಾಶ್ಮೀರದ ಲೈನ್ ಆಫ್ ಕಂಟ್ರೋಲ್ ಬಳಿ ತೀತ್ವಲ್‌ ನಲ್ಲಿರುವ ಹೊಸದಾಗಿ ನಿರ್ಮಿಸಿರುವ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುವ ತಾಯಿ ಶಾರದೆಯ ಪಂಚಲೋಹ ಮೂರ್ತಿಗೆ ಶುಕ್ರವಾರದಂದು ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಮೂರ್ತಿಯನ್ನು ಶೃಂಗೇರಿ ಮಠ ಸಿದ್ಧಪಡಿಸಿದ್ದು, ಬೆಂಗಳೂರಿನ ಜಯನಗರದಲ್ಲಿರುವ ಕಾಶ್ಮೀರ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿತ್ತು. ಶೃಂಗೇರಿ ಮಠದ ಪುರೋಹಿತರು ಹಾಗೂ ಕಾಶ್ಮೀರದ ಪಂಡಿತರಿಬ್ಬರಿಂದಲೂ ಪೂಜಾ ಕೈಂಕರ್ಯಗಳು ನೆರವೇರಿದವು. ಈ ಹಿಂದೆ ಈ ಮೂರ್ತಿಯನ್ನು ಬಸವನಗುಡಿಯಲ್ಲಿರುವ ಶ್ರೀ ಶಂಕರ ಮಠದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ಭಾನುವಾರದಂದು, ರಥದಂತೆ ಪರಿವರ್ತನೆಗೊಂಡಿರುವ ಶಾರದಾದೇವಿಯ ಮೂರ್ತಿಯನ್ನು ಸಾಗಿಸುವ ವಾಹನ ಮೂರ್ತಿಯೊಂದಿಗೆ ಮುಂಬೈನತ್ತ ತೆರಳಿತು.

‘ಸೇವ್ ಶಾರದಾ ಕಮಿಟಿ’ಯ ಸದಸ್ಯರೂ ಆಗಿರುವಂತಹ ಪತ್ರಕರ್ತ ಆರ್.ಕೆ. ಮಟ್ಟೂ ಅವರ ಪ್ರಕಾರ ಈ ಶಾರದಾದೇವಿ ಮೂರ್ತಿಯ ಮೆರವಣಿಗೆ ಪುಣೆ, ಅಹ್ಮದಾಬಾದ್, ಜೈಪುರ, ದೆಹಲಿ-ಎನ್‌ ಸಿಆರ್, ಅಮೃತಸರ್, ಚಂಡೀಘಡ, ಜಮ್ಮು ಹಾಗೂ ಕುಪ್ವಾರ ಒಳಗೊಂಡಂತೆ ವಿವಿಧ ನಗರಗಳ ಮೂಲಕ ಸಾಗಲಿದೆ. ಈ ಯಾತ್ರೆಯು ಜನವರಿ 24ರಂದು ಶೃಂಗೇರಿಯಿಂದ ಹೊರಟಿತು. ಈ ವಿಗ್ರಹವನ್ನು ತೀತ್ವಲ್‌ನಲ್ಲಿರುವ ಹೊಸದಾಗಿ ನಿರ್ಮಿಸಿರುವ ಶಾರದಾ ದೇವಾಲಯದಲ್ಲಿ ಮಾರ್ಚ್ 22ರಂದು ಉಗಾದಿಯ ದಿನದಂದು ಪ್ರತಿಷ್ಠಾಪಿಸಲಾಗುವುದು.

ತೀತ್ವಲ್, ಕಾಶ್ಮೀರದ ಒಂದು ಅತ್ಯಂತ ಸುಂದರ, ನಿಸರ್ಗದಿಂದ ಕೂಡಿರುವ ಗ್ರಾಮವಾಗಿದ್ದು, ನಮ್ಮ ದೇಶದ ಅಂಚಿನಲ್ಲಿರುವ ಕೊನೆಯ ಗ್ರಾಮವಾಗಿದೆ. ಈ ಗ್ರಾಮದ ಒಂದು ಭಾಗ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿದ್ದು, ಉಳಿದ ಭಾಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕಡೆಗಿದೆ.

“ಬೆಂಗಳೂರಿನಲ್ಲಿರುವ ಕಾಶ್ಮೀರ ಭವನಕ್ಕೆ ಈ ವಿಗ್ರಹವನ್ನು ತಂದು ಪ್ರಾರ್ಥನೆ, ಪೂಜೆಗಳನ್ನು ಸಲ್ಲಿಸುವುದು ಭಕ್ತರ ಅಪೇಕ್ಷೆಯಾಗಿತ್ತು. ಶೃಂಗೇರಿ ಮಠವು ನಮಗೆ ಕೇವಲ ವಿಗ್ರಹವನ್ನು ನೀಡಿರುವುದಷ್ಟೇ ಅಲ್ಲದೆ, ದೇವಾಲಯದ ನಿರ್ಮಾಣಕ್ಕಾಗಿ ಕಲ್ಲುಗಳನ್ನು ಒದಗಿಸುವಂತಹ ಇತರೆ ನೆರವನ್ನೂ ಸಹ ಒದಗಿಸಿದೆ. ನಾವು ತೀತ್ವಲ್‌ ನಲ್ಲಿ ೧೯೪೭ರಲ್ಲಿ ಕಳೆದುಕೊಂಡಂತಹ ಪರಂಪರೆಯನ್ನು ಮರಳಿ ತರಲು ಪ್ರಯತ್ನಿಸುತ್ತಿದ್ದೇವೆ,” ಎಂದು ಮಟ್ಟೂ ಈ ಸಂದರ್ಭದಲ್ಲಿ ತಿಳಿಸಿದರು.

ಪ್ರಾಚೀನ ಭಾರತದ ಕಲಿಕೆಯ ಕೇಂದ್ರಸ್ಥಾನವಾಗಿದ್ದಂತಹ ಪ್ರಾಚೀನ ಶಾರದಾ ದೇವಾಲಯವನ್ನು ಪುನರುಜ್ಜೀವನಗೊಳಿಸುವ ಉದ್ದೇಶದೊಂದಿಗೆ ಈ ಸಮಿತಿಯನ್ನು ರಚಿಸಲಾಯಿತು. ಪ್ರಸ್ತುತ ಈ ದೇವಾಲಯವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅವಶೇಷ ಪರಿಸ್ಥಿತಿಯಲ್ಲಿದೆ. ಈ ದೇವಾಲಯವನ್ನು ಮೂಲ ಶಾರದಾ ಪೀಠದಿಂದ ಸುಮಾರು ೪೦ ಕಿ.ಮೀ.ಗಳ ದೂರದಲ್ಲಿ ಕೃಷ್ಣಗಂಗಾ ನದಿಯ ದಡದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಪುನರ್‌ ನಿರ್ಮಾಣಕ್ಕೆ ಬರೋಬ್ಬರಿ ೭೬ ವರ್ಷಗಳೇ ಬೇಕಾಯಿತು.

– ಆಶಾ ಕೃಷ್ಣಸ್ವಾಮಿ

ENGLISH SUMMARY…

Bengaluru Kashmir Bhavan offers special pooja to Sharada

Bangalore,jan,27,2023(www.justkannada.in)The Save Sharada Committee, Kashmir conducted a special pooja on Friday for the panchaloha idol of Goddess Sharada, which is going to be installed in a newly constructed temple in Teetwal, close to the Line of Control in Kashmir.

The Sharada idol, contributed by Sringeri Math, was kept for public viewing at Kashmir Bhavan, Bengaluru. Goddess Sharada is the main deity of Kashmiri pundits. Both Sringeri Mutt priests and Kashmir pundits performed rituals. Previously, the idol was kept at Sri Shankara Mutt in Basavanagudi. On Sunday, the vehicle that has turned into a chariot and is carrying the idol will move to Mumbai.According to journalist RK Mattoo, a member of the Save Sharada Committee, the Sharada idol procession would pass through different cities, including Pune, Ahmedabad, Jaipur, Delhi-NCR, Amritsar, Chandigarh, Jammu, and Kupwara. The yatra began in Sringeri on January 24. The statue would be consecrated on Ugadi, March 22, in the newly built Sharada temple at Teetwal.Teetwal, a picturesque village in Kashmir, is the last border village. Part of the village lies in the Kupwara district of Kashmir, while the other half falls in Pakistan-occupied Kashmir.”It was the desire at Kashmir Bhavan in Bengaluru to bring the idol here and offer prayers. Sringeri Mutt has not only given us the idol but even other help, like sending stones for the construction of the temple. “We are trying to reclaim the lost heritage of 1947 at Teetwal,” Mattoo said.The committee was established to revive the ancient Sharada temple, which used to be a seat of learning in ancient India. Now it

Key words: Special pooja – Sharada -Kashmir Bhawan-Bangalore