ವಿಂಬಲ್ಡನ್‌: ಸೆರೆನಾ ವಿಲಿಯಮ್ಸ್‌-ಸಿಮೋನಾ ಹಾಲೆಪ್‌ ಫೈನಲ್ಸ್’ಗೆ

Promotion

ಲಂಡನ್, ಜುಲೈ 12, 2019 (www.justkannada.in): ಸೆರೆನಾ ವಿಲಿಯಮ್ಸ್‌ ಮತ್ತು ಸಿಮೋನಾ ಹಾಲೆಪ್‌ ವಿಂಬಲ್ಡನ್‌ ಮಹಿಳಾ ಸಿಂಗಲ್ಸ್‌ ಫೈನಲ್‌ ಪ್ರವೇಶಿಸಿದ್ದಾರೆ. ಶನಿವಾರ ಇವರಿಬ್ಬರ ನಡುವೆ ಪ್ರಶಸ್ತಿ ಕಾಳಗ ನಡೆಯಲಿದೆ.

7 ಬಾರಿಯ ವಿಂಬಲ್ಡನ್‌ ಚಾಂಪಿ ಯನ್‌ ಸೆರೆನಾ ವಿಲಿಯಮ್ಸ್‌ ಸೆಮಿಫೈನಲ್‌ನಲ್ಲಿ ಜೆಕ್‌ ಗಣರಾಜ್ಯದ ಬಾಬೊìರಾ ಸ್ಟ್ರೈಕೋವಾ ವಿರುದ್ಧ 6-1, 6-2 ಸುಲಭ ಗೆಲುವು ಸಾಧಿಸಿದರು.

3 ವರ್ಷಗಳ ಬಳಿಕ ವಿಂಬಲ್ಡನ್‌ ಪ್ರಶಸ್ತಿಯತ್ತ ದಾಪು ಗಾಲಿಕ್ಕಿದ್ದಾರೆ.ರೊಮೇನಿಯಾದ ಸಿಮೋನಾ ಹಾಲೆಪ್‌ 6-1, 6-3 ಸೆಟ್‌ಗಳ ಅಂತರ ದಿಂದ ಉಕ್ರೇನಿನ ಎಲಿನಾ ಸ್ವಿಟೋಲಿನಾ ವಿರುದ್ಧ ಗೆದ್ದು ಬಂದರು.

ಇಂದು ಪುರುಷರ ಸೆಮಿಫೈನಲ್‌
ಶುಕ್ರವಾರ ಪುರುಷರ ಸಿಂಗಲ್ಸ್‌ ವಿಭಾಗದ ಎರಡು ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ. ಮೊದಲ ಸೆಮಿಫೈನಲ್‌ನಲ್ಲಿ ಸರ್ಬಿಯಾದ ಜೊಕೋವಿಕ್‌ ಸ್ಪೇನ್‌ನ ರಾಬರ್ಟೊ ಬೌಟಿಸ್ಟಾ ಆಗುಟ್‌ ಅವರನ್ನು ಎದುರಿಸಲಿದ್ದಾರೆ. ಮತ್ತೂಂದು ಸೆಮಿಫೈನಲ್‌ನಲ್ಲಿ ನಡಾಲ್‌- ಫೆಡರರ್‌ ಮುಖಾ ಮುಖೀಯಾಗಲಿದ್ದಾರೆ.