ಅಣ್ಣಾವ್ರ ಮನೆಯಲ್ಲಿ ಮದುವೆ ಸಂಭ್ರಮ: ಚಿರಂಜೀವಿ ಕುಟುಂಬಕ್ಕೆ ಮದುವೆ ಆಮಂತ್ರಣ

Promotion

ಬೆಂಗಳೂರು, ಮೇ 13, 2019 (www.justkannada.in): ವರನಟ ರಾಜ್ ಕುಟುಂಬದ ಮೂರನೇ ಕುಡಿ ಯುವ ರಾಜ್ ಕುಮಾರ್ ಅವರ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಸದ್ಯ ರಾಜ್ ಕುಟುಂಬದ ಆಮಂತ್ರಣ ಸಿನಿತಾರೆಯರಿಗೆ ತಲುಪುತ್ತಿದೆ.

ನಟ ರಾಜಕುಮಾರ್​ ಅವರ ಮೊಮ್ಮಗ, ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅವರ ಪುತ್ರ, ಯುವ ರಾಜಕುಮಾರ್ ವಿವಾಹ ಮಹೋತ್ಸವಕ್ಕೆ ಆಮಂತ್ರಣ ಪತ್ರಿಕೆ ಈಗಾಗಲೇ ಹಲವಾರು ನಟ ನಟಿಯರಿಗೆ ತಲುಪಿದೆ.

ನಟ ಚಿರಂಜೀವಿ ಅವರ ಕುಟುಂಬಕ್ಕೂ ಆಮಂತ್ರಣ ತಲುಪಿದೆ. ಪುನೀತ್ ರಾಜ್ ಕುಮಾರ್ , ವಿನಯ್ ರಾಜ್ ಕುಮಾರ್ ಹಾಗೂ ಯುವ ರಾಜ್ ಕುಮಾರ್ ಚಿರಂಜೀವಿ ಅವರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ.