ಪ್ರೀತಿ ನಿರಾಕರಿಸಿದ್ದಕ್ಕೆ ಕೆನ್ನೆಗೆ ಹೊಡೆದ ಯುವಕ ; ಘಟನೆಯಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣು.

Promotion

 

ಬೆಂಗಳೂರು, ಮೇ 08, 2019 :(www.justkannada.in news) ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನೊಬ್ಬ ಯುವತಿ ಅದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ ಎಂದು ಗೆಳೆಯರ ಎದುರೇ ಕೆನ್ನೆಗೆ ಹೊಡೆದ. ಇದರಿಂದ ಮನನೊಂದ ಆ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಬೆಂಗಳೂರಿನ ಕೆ.ಆರ್.ಪುರಂನ ಅಕ್ಷಯನಗರದ ಶ್ರೀನಿವಾಸ್ ಮೂರ್ತಿ ಎಂಬುವವರ ಸಾಕು ಮಗಳು ಲೀನಾ (17)ಆತ್ಮಹತ್ಯೆಗೆ ಶರಣಾದ ಯುವತಿ.

ನಗರದ ಬಾಣಸವಾಡಿ ಸಿಎಂಆರ್ ಕಾಲೇಜಿನಲ್ಲಿ ಲೀನಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.ಈಕೆ 10ನೇ ತರಗತಿಯಲ್ಲಿ ಓದುತ್ತಿದ್ದಾಗ ಮಂಜುನಾಥ್ ಎಂಬಾತ ಆಕೆಯ ಸಹಪಾಠಿಯಾಗಿದ್ದ. ಆತನೇ, ಲೀನಾಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ನಿತ್ಯ ಕಾಲೇಜು, ಮನೆಯ ಹತ್ತಿರ ತೆರಳಿ ಕಾಟ ಕೊಡುತ್ತಿದ್ದ. ಆದರೆ ಇದ್ಯಾವುದಕ್ಕೂ ಜಗ್ಗದ ಲೀನಾ, ಆತನ ಹುಚ್ಚು ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಆರೋಪಿ ಮಂಜುನಾಥ್, ಲೀನಾ ಸ್ನೇಹಿತರ ಸಮ್ಮುಖದಲ್ಲೇ ಆಕೆಯ ಮೇಲೆ ಹಲ್ಲೆ ಮಾಡಿದ್ದ. ಈ ಘಟನೆಯಿಂದ ಮನನೊಂದ ಲೀನಾ, ಆತ್ಮಹತ್ಯೆಗೆ ಶರಣಾದಳು .

PU girl ends life after lovelorn slaps on her face in public