ಬಿಜೆಪಿ ರಾಜಕೀಯ ಲಾಭಕ್ಕಾಗಿ ಕೋಮು ಜ್ವಾಲೆ ಹೊತ್ತಿಸಲು ಬಯಸುತ್ತದೆ : ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್

ಬೆಂಗಳೂರು,ನವೆಂಬರ್,07,2020(www.justkannada.in) : ಬಿಜೆಪಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ಕೋಮು ಜ್ವಾಲೆಯನ್ನು ಹೊತ್ತಿಸಲು ಬಯಸುತ್ತಾರೆ. ಲವ್ ಜಿಹಾದ್ ಅನ್ನು ಯಾವುದೇ ಕಾನೂನು ದಾಖಲೆಯಲ್ಲಿ ವ್ಯಾಖ್ಯಾನಿಸಲಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಡಿಸಿದ್ದಾರೆ.

jk-logo-justkannada-logo

ಲವ್ ಜಿಹಾದ್  ಸಂಗತಿಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಗೃಹ ಸಚಿವರು ತಮ್ಮ ಇಚ್ಛೆಯ ಆಧಾರದ ಮೇಲೆ ಕಾನೂನು ಜಾರಿಗೊಳಿಸುವುದೇ ಎಂದು ಪ್ರಶ್ನಿಸಿದ್ದಾರೆ.

ನ್ಯಾಯಾಲಯ ಅಂತರ್-ಧಾರ್ಮಿಕ ವಿವಾಹ ತಪ್ಪು ಎಂದು ಹೇಳಿಲ್ಲ

ಬಿಜೆಪಿಯು  ಇತ್ತೀಚಿಗೆ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನಿಸುವ ಮೂಲಕ ದಾರಿ ತಪ್ಪಿಸಲು ಬಯಸಿದೆ. ನ್ಯಾಯಾಲಯವು ಅಂತರ್-ಧಾರ್ಮಿಕ ವಿವಾಹದ ಉದ್ದೇಶದಿಂದ ಮತಾಂತರ ಮಾಡುವುದು ತಪ್ಪು ಎಂದು ಮಾತ್ರ ಹೇಳುತ್ತದೆ, ಆದರೆ, ಅಂತರ್-ಧಾರ್ಮಿಕ ವಿವಾಹವೇ ತಪ್ಪು ಎಂದು ಅದು ಹೇಳುವುದಿಲ್ಲ ಎಂದು ಹೇಳಿದ್ದಾರೆ.political,gain,BJP,communal,flame,wants,ignite,Former,CM Siddaramaiah,tweeted

ಬಿ.ಎಸ್.ಯಡಿಯೂರಪ್ಪ ಉತ್ತರ ಪ್ರದೇಶ ಸಿಎಂ ರಿಂದ ಸ್ಪೂರ್ತಿ ಪಡೆಯುತ್ತಿದ್ದಾರೆ

ದುರದೃಷ್ಟಕರ ಸಂಗತಿಯೆಂದರೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಉತ್ತರ ಪ್ರದೇಶದ ಸಿಎಂ ಅವರಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ. ಕರ್ನಾಟಕ ಯಾವಾಗಲೂ ಉದಾರ ಮತ್ತು ಪ್ರಗತಿಪರ ವಿಚಾರಗಳಿಗೆ ಹೆಸರುವಾಸಿಯಾಗಿದೆ. ಹೀಗಾಗಿ, ‘ಗೂಂಡಾ ರಾಜ್ಯ’ ಎಂದು ಕರೆಯಲ್ಪಡುವ ಉತ್ತರ ಪ್ರದೇಶ ಎಂದಿಗೂ ಸ್ಫೂರ್ತಿ ಅಥವಾ ಮಾದರಿ ರಾಜ್ಯವಾಗಲು ಸಾಧ್ಯವಿಲ್ಲ ಎಂದು ಟ್ವಿಟರ್ ನಲ್ಲಿ ಟೀಕಿಸಿದ್ದಾರೆ.

political,gain,BJP,communal,flame,wants,ignite,Former,CM Siddaramaiah,tweeted

key words : political-gain-BJP-communal-flame-wants-ignite-Former-CM Siddaramaiah-tweeted