ನ.9 ರಂದು ಕೆಎಸ್ ಒಯುನಲ್ಲಿ  ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ಆನ್ ಲೈನ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ…

Promotion

ಮೈಸೂರು,ನವೆಂಬರ್,7,2020(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ 50 ದಿನಗಳ ಆನ್ ಲೈನ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು   ನವೆಂಬರ್ 9ರ ಸೋಮವಾರ ಬೆಳಗ್ಗೆ 11ಕ್ಕೆ ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಲಿದ್ದು 206 ಪುಟದ ‘ಮುಕ್ತ ಭಂಡಾರ ‘ಅಧ್ಯಯನ ಕೈಪಿಡಿ (SOFT COPY) ಬಿಡುಗಡೆ ಮಾಡುವರು. ನಾಡಿನ ಹಿರಿಯ ಐಪಿಎಸ್ ಅಧಿಕಾರಿ ಡಾ. ಚಂದ್ರಗುಪ್ತ ಅವರು ಆನ್ ಲೈನ್ ನಲ್ಲಿಯೇ ತರಬೇತಿ ಶಿಬಿರಾರ್ಥಿಗಳಿಗೆ ಶುಭಹಾರೈಸುವರು.

ಮೈಸೂರು ವಲಯದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಐ. ಪಾಂಡುರಂಗ ಮಿತಂತಾಯ ಶುಭ ನುಡಿಯುವರು. ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಉಪಸ್ಥಿತರಿರುವರು. ಕರ್ನಾಟಕ ಬ್ಯಾಂಕ್ ಪ್ರೊಬೇಷನರಿ ಅಧಿಕಾರಿಗಳಾಗಿದ್ದು, ಪ್ರಸ್ತುತ ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕು ತಹಸೀಲ್ದಾರ್  ಕೆಎಎಸ್ ಅಧಿಕಾರಿಯಾಗಿರುವ ಬಿಕೆ ಸುದರ್ಶನ್ ಪರೀಕ್ಷಾ ಸಿದ್ಧತೆಗಳು’ ಕುರಿತು ಮಾತನಾಡುವರು ಎಂದು ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ತಿಳಿಸಿದ್ದಾರೆ.

Key words: Opening – Banking Posts- Recruitment – Training Camp – KSOU