ರಸ್ತೆ ಅಪಘಾತದಿಂದಾಗಿ ಬಯಲಾಯ್ತು ಯುವತಿಯ ಕೊಲೆ ರಹಸ್ಯ.

Promotion

ರಾಮನಗರ,ಮೇ,10,2022(www.justkannada.in):  ಯುವತಿಯೊಬ್ಬರನ್ನ ದಂಪತಿ ಕೊಲೆ ಮಾಡಿದ್ದ ಘಟನೆ ಬೈಕ್ ರಸ್ತೆ ಅಪಘಾತದಿಂದ ಬಯಲಾಗಿದೆ. ಯುವತಿಯನ್ನ ಕೊಲೆಗೈದು ಮೃತದೇಹ ಸಾಗಿಸುವ ವೇಳೆ ಅಪಘಾತ ನಡೆದಿದೆ.

ರಾಮನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಈ ಘಟನೆ ನಡೆದಿದೆ. ಹಣಕಾಸಿನ‌ ವಿಚಾರವಾಗಿ  ಬೆಂಗಳೂರಿನ ಕೆಂಚೇನಹಳ್ಳಿಯ ಬಾಡಿಗೆ ಮನೆಯಲ್ಲಿದ್ದ ‌ ಸೌಮ್ಯ ಎಂಬ ಯುವತಿಯನ್ನು ರಘು ಹಾಗೂ ಆತನ‌ ಪತ್ನಿ ದುರ್ಗಾ ಇಬ್ಬರು ಹತ್ಯೆ ಮಾಡಿದ್ದಾರೆ. ಈ ನಡುವೆ ಮೃತದೇಹವನ್ನ ಬೈಕ್ ನಲ್ಲಿ ಮಧ್ಯದಲ್ಲಿ ಇಟ್ಟುಕೊಂಡು ರಘು ಭಾಮೈದ ನಾಗರಾಜ್ ಹಾಗೂ ಸ್ನೇಹಿತ ವಿನೋದ್  ಚನ್ನಪಟ್ಟಣದತ್ತ ಸಾಗಿಸುತ್ತಿದ್ದರು.

ರಾಮನಗರದ ಜಿಲ್ಲಾಧಿಕಾರಿ ಕಚೇರಿ ಬಳಿ  ಹಂಪ್ಸ್ ಹಾರಿಸುವ ವೇಳೆ ಆರೋಪಿಗಳು ಹಾಗೂ ಮೃತದೇಹ ಕೆಳಗೆ ಬಿದ್ದಿದ್ದು, ಈ ವೇಳೆ ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲು‌ ಮಾಡಿದ್ದಾರೆ.  ವೈದ್ಯರು ಮೃತದೇಹವನ್ನು ಗಮನಿಸಿದ್ದು, ಮಹಿಳೆ ಸಾವನ್ನಪ್ಪಿ ಬಹಳ ಸಮಯವಾಗಿದೆ. ಅಪಘಾತದಿಂದ ಸಾವು‌ ಸಂಭವಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಅನುಮಾನದಿಂದ ಪೊಲೀಸರು ತಪಾಸಣೆ ನಡೆಸಿದ್ದು, ಈ ವೇಳೆ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಗಳಿಗೆ ಅಪಘಾತದಿಂದ ಗಂಭೀರ ಗಾಯವಾಗಿದೆ.

Key words: mystery – murder – young woman – road accident.