ವಾಟಾಳ್ ನಾಗರಾಜ್, ಸಾ.ರ.ಗೋವಿಂದು ಬಂಧನ..!

Promotion

 

ಮೈಸೂರು, ನ.29, 2020 : ( www.justkannada.in news ) ಮರಾಠ ಪ್ರಾಧಿಕಾರ ವಿರೋಧಿಸಿ ಹೆದ್ದಾರಿ ತಡೆ. ಮೈಸೂರಿನ ಕೊಲಂಬಿಯಾ ಏಷ್ಯ ವೃತ್ತದಲ್ಲಿ ಪ್ರತಿಭಟನೆ. ವಾಟಾಳ್ ನಾಗರಾಜ್, ಸಾರಾ ಗೋವಿಂದ್ ನೇತೃತ್ವದಲ್ಲಿ ಪ್ರತಿಭಟನೆ. ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ ಕಾರ್ಯಕರ್ತರು. ಪ್ರತಿಭಟನೆಯಲ್ಲಿ ವಿವಿಧ ಕನ್ನಡಪರ ಸಂಘಟನೆ ಭಾಗಿ.

ಮೈಸೂರು ಬೆಂಗಳೂರು ಮುಖ್ಯ ರಸ್ತೆಯ ಹೆದ್ದಾರಿ ತಡೆದು ಆಕ್ರೋಶ. ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ವಾಟಾಳ್ ನಾಗರಾಜ್‌ರನ್ನ ವಶಕ್ಕೆ ಪಡೆದ ಪೊಲೀಸರು. ವಾಟಾಳ್ ನಾಗರಾಜ್ ಸೇರಿದಂತೆ ಸಾರಾ ಗೋವಿಂದರನ್ನ ವಶಕ್ಕೆ ಪಡೆದ ಪೊಲೀಸರು. ಡಿಆರ್ ವಾಹನದಲ್ಲಿ ವಶಕ್ಕೆ ಪಡೆದು ಕರೆದೋಯ್ದ ಪೊಲೀಸರು. ವಾಟಾಳ್, ಗೋವಿಂದು ಹಲವು ಹೋರಾಟಗಾರರು ಪೊಲೀಸರ ವಶಕ್ಕೆ. ಮೈಸೂರಿನ ಕೊಲಂಬಿಯಾ ಏಷ್ಯ ಆಸ್ಪತ್ರೆ ವೃತ್ತದಲ್ಲಿ ವಶಕ್ಕೆ ಪಡೆದ ಪೊಲೀಸರು.

logo-justkannada-mysore

ಯಡಿಯೂರಪ್ಪ ಅವರೇ ನೀವೂ ಸರ್ವಾಧಿಕಾರಿ ಮುಖ್ಯಮಂತ್ರಿ. ಈವರೆಗು ನಿಮ್ಮಂತ ಸರ್ವಾಧಿಕಾರಿ ಬಂದಿಲ್ಲ. ನಿಮಗೆ ಕನ್ನಡದ ಬಗ್ಗೆ ಯಾವುದೇ ಅಭಿಮಾನವಿಲ್ಲ. ಇದನ್ನ ಹಿಂಪಡೆಯದಿದ್ದರೆ ಕರ್ನಾಟಕ ಬಂದ್ ಅನಿವಾರ್ಯ. ನಾಳೆ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್‌‌ನಲ್ಲಿ ಕರಾಳ ದಿನ ಆಚರಣೆ. ಬೃಹತ್ ಕರಾಳ ದಿನಾಚರಣೆ ಆಚರಣೆಗೆ ಕನ್ನಡಪರ ಸಂಘಟನೆ ಬನ್ನಿ. ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ.

mysore-kannada-vatal.nagaraj.govindu-arrested-police

 

key words : mysore-kannada-vatal.nagaraj.govindu-arrested-police