ಮೈಸೂರಿನಲ್ಲಿ ಎರಡು ದಿನಗಳ ಕಾಲ ಬೃಹತ್ ಉದ್ಯೋಗ ಮೇಳ- ಈ ಬಗ್ಗೆ ಮಾಹಿತಿ ನೀಡಿದ ಜಿ.ಪಂ‌ ಸಿಇಓ ಜ್ಯೋತಿ…..

Promotion

ಮೈಸೂರು, ಫೆ,15,2020(www.justkannada.in) ಮೈಸೂರು ಜಿಲ್ಲಾಡಳಿತದ ವತಿಯಿಂದ ಫೆಬ್ರವರಿ 19 ಮತ್ತು 20 ರಂದು  ಪ್ರಾದೇಶಿಕ ಮಟ್ಟದ ಬೃಹತ್ ಉದ್ಯೋಗ ಮೇಳವನ್ನ ಆಯೋಜಿಸಲಾಗಿದೆ.

ಮೈಸೂರಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಇಲಾಖೆ ಸಹಯೋಗದಲ್ಲಿ  ಎರಡು ದಿನಗಳ ಕಾಲ ಉದ್ಯೋಗ ಮೇಳ ನಡೆಯಲಿದೆ. ಈ ಬಗ್ಗೆ ಜಿ‌‌.ಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರು ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಜ್ಯೋತಿ ಅವರು, ಉದ್ಯಮ ಮೇಳಕ್ಕೆ  ಮೈಸೂರು, ಮಂಡ್ಯ, ಕೊಡಗು ಜಿಲ್ಲೆಗಳ ಅಭ್ಯರ್ಥಿಗಳಿಗೆ ಆಹ್ವಾನನೀಡಲಾಗಿದೆ.  ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣರಿಂದ ಉದ್ಯೋಗ ಮೇಳ ಉದ್ಘಾಟನೆ ಮಾಡಲಿದ್ದು, ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್, ಸಚಿವರಾದ ಆರ್.ಅಶೋಕ್, ಕೆ.ಸಿ.ನಾರಾಯಣಗೌಡ, ಶಾಸಕ ಎಲ್.ನಾಗೇಂದ್ರ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಉದ್ಯೋಗ ಮೇಳದಲ್ಲಿ  ಇನ್ಫೋಸಿಸ್, ವಿಪ್ರೋ, ಹೋಂಡಾ, ಜೆ.ಕೆ.ಟೈರ್ಸ್, ಏಷಿಯನ್ ಪಾಯಿಂಟ್ಸ್ ಸೇರಿ ಹಲವು ಪ್ರತಿಷ್ಠಿತ ಸಂಸ್ಥೆಗಳು, ಸುಮಾರು 100ಕ್ಕೂ ಹೆಚ್ಚು ಸಂಸ್ಥೆಗಳು ಭಾಗಿಯಾಗಲಿವೆ. ಉದ್ಯೋಗ ಮೇಳಕ್ಕೆ ನೊಂದಾಯಿಸಿಕೊಳ್ಳಲು 10ಕೌಂಟರ್ ತೆರೆಯಲಾಗಿದ್ದು, ಆನ್ ಲೈನ್ ನೊಂದಣಿ ತೆರೆಯಲಾಗಿದೆ ಎಂದು ಜಿ.ಪಂ‌ ಸಿಇಓ ಜ್ಯೋತಿ ಹೇಳಿದರು.

Key words: mysore- job fair – two days –ZP-CEO –Jyothi- information