ಪರಿಸರ ಉಳಿದರೇ ಮಾತ್ರ ಭೂಮಂಡಲದಲ್ಲಿ ಮನುಷ್ಯರು ಬದುಕಲು ಸಾಧ್ಯ- ಶಾಸಕ ಎಲ್ ನಾಗೇಂದ್ರ.

ಮೈಸೂರು,ಮಾರ್ಚ್,20,2022(www.justkannada.in): ಪರಿಸರ ಉಳಿದರೇ ಮಾತ್ರ ಭೂಮಂಡಲದಲ್ಲಿ ಮನುಷ್ಯರು ಬದುಕಲು ಸಾಧ್ಯ ಎಂದು ಶಾಸಕ ಎಲ್ ನಾಗೇಂದ್ರ ತಿಳಿಸಿದರು.

ಮೈಸೂರಿನಲ್ಲಿ ಕೆಎಂಪಿಕೆ ಟ್ರಸ್ಟ್ ಹಾಗೂ ಪರಿಸರ ಸ್ನೇಹಿ ತಂಡದ ವತಿಯಿಂದ ಅಂತರಾಷ್ಟ್ರೀಯ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಜಾಗೃತಿಗಾಗಿ  ಪರಿಸರ ಸೈಕಲ್ ಜಾಥ ಆಯೋಜಿಸಲಾಗಿತ್ತು. 350ಕ್ಕೂ ಹೆಚ್ಚು ಮಂದಿ ಸೈಕಲ್ ಸವಾರರು  ಜಾಥಾದಲ್ಲಿ ಭಾಗವಹಿಸಿದ್ದರು, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮಾರ್ಗವಾಗಿ ಜಯಚಾಮರಾಜೇಂದ್ರ ವೃತ್ತ ಚಾಮರಾಜ ಜೋಡಿ ರಸ್ತೆ ರಾಮಸ್ವಾಮಿ ವೃತ್ತ ಮಹಾರಾಜ ಕಾಲೇಜು ಮೈದಾನ ಕೃಷ್ಣಬುಲೇ‌ ವಾರ್ಡ್ ರೋಡ್ ಕೌಟಿಲ್ಯ ವೃತ್ತದಿಂದ ಕುಕ್ಕರಹಳ್ಳಿ ಕೆರೆವರೆಗೂ ಸೈಕಲ್ ಜಾಥಾ ಸಾಗಿತು.

ಸೈಕಲ್ ಜಾಥಾದಲ್ಲಿ ಭಾಗವಹಿಸಿದ ಕುಕ್ಕರಹಳ್ಳಿ ಎಲ್ಲಾ ಸೈಕಲ್ ಸವಾರರಿಗೂ ಸಮಾರೋಪದಲ್ಲಿ ಹೆಚ್. ವಿ ರಾಜೀವ್ ಅಭಿನಂದನಾ ಪತ್ರ ವಿತರಿಸಿದರು, ಪರಿಸರ ಉಳಿಸಿ ಪ್ರಾಣಿಪಕ್ಷಿ ರಕ್ಷಿಸಿ, ಹಸಿರೇ ಉಸಿರು, ಮಾಲನ್ಯ ಮುಕ್ತ ಮೈಸೂರು, ಬೇಸಿಗೆಯಲ್ಲಿ ಪ್ರಾಣಿಪಕ್ಷಿಗಳಿಗೆ ಮನೆಗಳ ಮೇಲೆ ತಾರಸಿ ಆಹಾರ ನೀರು ಇಡೋಣ ಎಂಬ ಘೋಷಣೆಗಳ  ಭಿತ್ತಿಪತ್ರದ ಮೂಲಕ ಪರಿಸರ ಕಾಳಜಿ ಸಂದೇಶ ಸಾರಿದರು

ಕಾರ್ಯಕ್ರಮದಲ್ಲಿ ಸೈಕಲ್  ತುಳಿಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಸಕ ಎಲ್ ನಾಗೇಂದ್ರ ಪರಿಸರ ಉಳಿದರೇ ಮಾತ್ರ ಭೂಮಂಡಲದಲ್ಲಿ ಮನುಷ್ಯರು ಬದುಕಲು ಸಾಧ್ಯ, ಬೇಸಿಗೆಯ ಬಿಸಲಿನ ತಾಪಮಾನ ಹೆಚ್ಚುತ್ತಿರುವದರಿಂದ ಸಣ್ಣಪುಟ್ಟ ಪ್ರಾಣಿಪಕ್ಷಿಗಳ ಜೀವ ಉಳಿಸಲು ಪ್ರತಿಯೊಬ್ಬರ ತಮ್ಮ ಮನೆಯ ತಾರಸಿಯ ಮೇಲೆ ನೀರು ಧಾನ್ಯಗಳನ್ನ ಇಡಲು ಮುಂದಾಗಬೇಕು, ಗುಬ್ಬಚ್ಚಿಯ ಸಂತತಿ‌ ಉಳಿಯಬೇಕಿದೆ, ಭೂಮಿಯಲ್ಲಿ ಮನುಷ್ಯರಂತೆ ಪ್ರಾಣಿಪಕ್ಷಿಗಳಿಗೂ ಬದುಕುವ ಸ್ವತಂತ್ರತೆಯಿದೆ, ಯುವಕರು ಹೆಚ್ಚಾಗಿ ಪರಿಸರ ಸೇವಾಮನೋಭಾವ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.

ಈ ಸಂಧರ್ಭದಲ್ಲಿ  ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ, ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್ , ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮೇಯರ್ ಸುನಂದಾ ಪಾಲನೇತ್ರ ,ಶಾಸಕರಾದ ಎಲ್ ನಾಗೇಂದ್ರ ,ಮೂಡ ಅಧ್ಯಕ್ಷರಾದ ಎಚ್ ವಿ ರಾಜೀವ್ , ಬಿಳಿಗಿರಿ ರಂಗನಬೆಟ್ಟದ ಮುಖ್ಯಾಧಿಕಾರಿ ಮಲ್ಲೇಶಪ್ಪ , ,ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕರಾದ ಸಿ ಜಿ ಗಂಗಾಧರ್ ,ಮಾಜಿ ಮಹಾಪೌರ ಸಂದೇಶ್ ಸ್ವಾಮಿ ,ಕಾಂಗ್ರೆಸ್ ಯುವ ಮುಖಂಡ ಎನ್  ಎಂ ನವೀನ್ ಕುಮಾರ್, ಸುಯೋಗ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ॥ ಎಸ್ ಪಿ ಯೋಗಣ್ಣ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ , ಇಳೈ ಆಳ್ವಾರ್ ಸ್ವಾಮೀಜಿ ,ಮಹರ್ಷಿ  ಶಾಲೆಯ ಮುಖ್ಯಸ್ಥರಾದ ಭವಾನಿ ಶಂಕರ್,ನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್ , ಮೃಗಾಲಯ ಪ್ರಾಧಿಕಾರ ಸದಸ್ಯರಾದ ಜ್ಯೋತಿ ರಚನಾ ,ರಾಜ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ರಾಮೇಗೌಡ ,ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ , ಪರಿಸರ ಸ್ನೇಹಿ ಬಳಗದ ಅಧ್ಯಕ್ಷ ಲೋಹಿತ್ ,ಅಜಯ್ ಶಾಸ್ತ್ರಿ, ಜೋಗಿ ಮಂಜು ಸೇರಿ ಹಲವರು ಉಪಸ್ಥಿತರಿದ್ದರು.

Key words: mysore- International -Sparrow Day