ಮೈಸೂರು: ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಎಂಟು ಮಂದಿ ಯುವಕರ ಬಂಧನ..

Promotion

ಮೈಸೂರು,ಅಕ್ಟೋಬರ್,2,2020(www.justkannada.in): ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಎಂಟು ಮಂದಿ ಯುವಕರನ್ನ ನಗರದ ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.mysore-arrest-eight-youths-ipl-betting

ಗುರುಪ್ರಸಾದ್, ಅರುಣ್, ಪವನ್, ವಿನೋದ್, ವಿನೋದ್ ರಾಜ್, ಗಜೇಂದ್ರ, ಮೋಹನ್ ಬಂಧಿತರು. ಬಂಧಿತರು ಪೋಲಿಸರ ಕಟ್ಟೆಚ್ಚರದ ನಡುವೆಯೂ  ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಜೆಪಿ ನಗರದ ಕೊನೆ ಬಸ್ ನಿಲ್ದಾಣ ಬಳಿ ಸಾಯಿ ಟೀ ಹಿಂಭಾಗ ದಂಧೆಕೋರರು ಬೆಟ್ಟಿಂಗ್ ನಡೆಸುತ್ತಿದ್ದರು.mysore-arrest-eight-youths-ipl-betting

ಈ ವೇಳೆ ಎಸಿಪಿ ಪ್ರಭಾಕರ್, ಇನ್ಸ್‌ಪೆಕ್ಟರ್ ಡಿ ಮಂಜುನಾಥ್, ಎಸ್ ಸಿ ಮಂಜುನಾಥ್, ರವಿ, ಸುನೀಲ್, ರಮೇಶ್,ಸೇರಿದಂತೆ ಐದು ಮಂದಿ ಪೊಲೀಸರ ತಂಡ  ಕಾರ್ಯಾಚರಣೆ ನಡೆಸಿ ಎಂಟು ಮಂದಿ ಜೂಜುಕೋರರನ್ನ ಬಂಧಿಸಿದ್ದಾರೆ. ಬಂಧಿತರಿಂದ 9810. ರೂ ಹಣ 8 ಮೊಬೈಲ್ ಮತ್ತು 5 ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್  ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Key words: Mysore-Arrest –eight- youths – IPL betting