ವಿಶ್ವಕಪ್ ಕ್ರಿಕೆಟ್: ಗಾಯಗೊಂಡಿರುವ ಭುವನೇಶ್ವರ್ ಬದಲಿಗೆ ಮೊಹಮದ್ ಶಮಿ ?

Promotion

ಲಂಡನ್, ಜೂನ್ 18, 2019 (www.justkannada): ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಗಾಯಗೊಂಡು ಪೆವಿಲಿಯನ್ ಸೇರಿದ್ದ ವೇಗಿ ಭುವನೇಶ್ವರ್ ಕುಮಾರ್ ಇನ್ನು ಎರಡು ಅಥವಾ ಮೂರು ಪಂದ್ಯಗಳಿಗೆ ಅಲಭ್ಯರಾಗಿರುತ್ತಾರೆ.

ಸಚಿನ್ ತೆಂಡುಲ್ಕರ್ ಆ ಸ್ಥಾನಕ್ಕೆ ಮೊಹಮ್ಮದ್ ಶಮಿ ಹೆಸರು ಸೂಚಿಸಿದ್ದಾರೆ. ಶಮಿ ಫಾರ್ಮ್, ಹಿಂದಿನ ದಾಖಲೆಗಳನ್ನು ಗಮನಿಸಿದರೆ ಶಮಿಯೇ ಭುವಿ ಜಾಗದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.

ಬುಮ್ರಾ ಜತೆಗೆ ಮುಂದಿನ ಎರಡು ಪಂದ್ಯಗಳಲ್ಲಿ ಕ್ಲಿಕ್ ಆದರೆ ಶಮಿಗೆ ಮುಂದಿನ ಪಂದ್ಯಗಳಲ್ಲೂ ಅವಕಾಶ ಸಿಗುವ ಸಾಧ್ಯತೆಯಿದೆ.