ದರೋಡೆಗೆ ಹೊಂಚು ಹಾಕುತ್ತಿದ್ದ 8 ಮಂದಿ ಅಂದರ್…

Promotion

ಮೈಸೂರು,ಸೆಪ್ಟೆಂಬರ್,16,2020(www.justkannada.in) : ದರೋಡೆಗೆ ಹೊಂಚು ಹಾಕುತ್ತಿದ್ದ 8 ಮಂದಿಯನ್ನು ಮೈಸೂರು ಸರಸ್ವತಿಪುರಂ ಪೊಲೀಸರು ಬಂಧಿಸಿದ್ದಾರೆ.

jk-logo-justkannada-logo

ಖಚಿತ ಮಾಹಿತಿಯ ಮೇರೆಗೆ ಸರಸ್ವತಿಪುರಂ ಪೊಲೀಸರು ಕಾರ್ಯಚರಣೆ ನಡೆಸಿ ದರೋಡೆಗೆ ಹೊಂಚು ಹಾಕುತ್ತಿದ್ದ 8 ಮಂದಿಯನ್ನು ಬಂಧಿಸಿದ್ದಾರೆ. ಈ ಸಂದರ್ಭ 1 ಮಾರುತಿ ವ್ಯಾನ್, 4 ಬೈಕ್, 11 ಮೊಬೈಲ್, 6 ಸಾವಿರ ನಗದು ವಶಕ್ಕೆ ಪಡೆದುಕೊಂಡಿದ್ದಾರೆ.

ambushing-robber-8-arrests

ಆರೋಪಿಗಳಾದ ಶರತ್, ಸುಮಂತ್, ಧರ್ಮೇಶ್, ಶಶಾಂಕ್, ದಿನೇಶ್, ಸುನೀಲ್ ಕುಮಾರ್,‌ ಕಾರ್ತಿಕ್, ಮಹದೇವ್‌‌ ಅವರನ್ನು ಬಂಧಿಸಿದ್ದು, ಈ ಪ್ರಕರಣ ಸಂಬಂಧ‌ 5 ಇತರೆ ಠಾಣೆಯ ಪ್ರಕರಣವನ್ನು ಬೇಧಿಸಿದ್ದಾರೆ. ದರೋಡೆಗೆ ಸಂಚು ಮಾಡಲು ಬಳಸಲಾಗಿದ್ದ  ಲಾಂಗ್, ಹಾಕಿ ಸ್ಟಿಕ್, ಖಾರದಪುಡಿಯ 5 ಪ್ಯಾಕೆಟ್‌, ಎರಡು ಡ್ರ್ಯಾಗರ್, ಮಂಕಿ ಕ್ಯಾಪ್, ವಿಕೆಟ್‌ಗಳನ್ನು ಪೊಲೀಸರ ವಶಪಡಿಸಿಕೊಂಡಿದ್ದಾರೆ.

ambushing-robber-8-arrests

key words : ambushing-robber-8-arrests