ಕಾಂಗ್ರೆಸ್ ಗೆ  ಬಹುಮತ: ಬಿಜೆಪಿ ಆಪರೇಷನ್ ಕಮಲ ಮಾಡೋದು ಹಗಲುಗನಸು- ಸತೀಶ್ ಜಾರಕಿಹೊಳಿ.

Promotion

ಬೆಳಗಾವಿ,ಮೇ,12,2023(www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಬಿಜೆಪಿಯವರು ಆಪರೇಷನ್ ಕಮಲ ಮಾಡೋದು ಹಗಲುಗನಸು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ, ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನೂರಕ್ಕೆ ನೂರು ಬರಲ್ಲ. ಕಾಂಗ್ರೆಸ್ ಸರ್ಕಾರ ರಚನೆ ಆಗಿಯೇ ಆಗುತ್ತೆ. ಕಾಂಗ್ರಸ್ 120 ಸ್ಥಾನ ಗೆಲ್ಲುತ್ತದೆ. ಬಿಜೆಪಿಗೆ  75ರಿಂದ 80 ಸ್ಥಾನಗಳಷ್ಟೇ ಬರುತ್ತದೆ. ಬಿಜೆಪಿ ಅಪರೇಷನ್ ಕಮಲ ಮಾಡಲು ಆಗಲ್ಲ ವಿಪಕ್ಷದಲ್ಲಿ ಕುಳಿತು ಒಳ್ಳೆಯ ಸಲಹೆ ನೀಡಲಿ ಎಂದು ತಿಳಿಸಿದರು.

ನಮ್ಮ ಲೆಕ್ಕದಲ್ಲಿ ಬಹುಮತದ ಕೊರತೆ ಆಗಲ್ಲ. ದೇವೇಗೌಡರದ್ದು, ಕುಮಾರಸ್ವಾಮಿಯವರದ್ದು ಸಲಹೆ ಇದ್ದರೆ ಒಳ್ಳೆಯದು. ಸದ್ಯಕ್ಕೆ ಬಿಜೆಪಿಯವರು ಆಪರೇಷನ್​ ಕಮಲ ಮಾಡಲ್ಲ ಒಂದು ವರ್ಷ ಶಾಂತವಾಗಿ ಇದ್ದು, ನೋಡುತ್ತಾರೆ. ಲೋಕಸಭಾ ಚುನಾವಣೆ ಆಗುವವರೆಗೆ ಶಾಂತ ಆಗುತ್ತಾರೆ. ನಂತರ ಒಂದು ವರ್ಷದಲ್ಲಿ ನಾವು ಗಟ್ಟಿಯಾಗಬೇಕು. ಈ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೆ ಒಂದು ತಿರುವು ಆಗುತ್ತೆ ಎಂದು  ಸತೀಶ್​ ಜಾರಕಿಹೊಳಿ ತಿಳಿಸಿದರು.

Key words: Majority –Congress-BJP- Operation Kamala – Daydream – Sathish Jarakiholi.