ಗ್ರಾಪಂ ಚುನಾವಣೆಯಲ್ಲಿ ಸಾಕಷ್ಟು ‘ಕೈ’ ಕಾರ್ಯಕರ್ತರು ಗೆದ್ದಿದ್ದಾರೆ. ಸಿಎಂಗೆ ನಾನು ಪಟ್ಟಿ ಕೊಡಬಲ್ಲೆ- ಡಿ.ಕೆ ಶಿವಕುಮಾರ್ ಟಾಂಗ್….

Promotion

ಬೆಂಗಳೂರು,ಡಿಸೆಂಬರ್,31,2020(www.justkannada.in): ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ಧಿದ್ದಾರೆ ಎಂದು ಹೇಳಿಕೆ ನೀಡಿದ್ದ ಸಿಎಂ ಬಿಎಸ್ ಯಡಿಯೂರಪ್ಪಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.jk-logo-justkannada-mysore

ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,   ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಗೆದ್ದಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶದ ಬಗ್ಗೆ ನನಗೆ ಸಮಾಧಾನವಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈ ಪಕ್ಷದವರೇ ಗೆದ್ದರು ಎಂದು ಹೇಗೆ ಗುರುತಿಸುತ್ತೀರಿ. ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ಗೆದ್ದಿದ್ದಾರೆ. ಈ ಬಗ್ಗೆ ನಾನು ಸಿಎಂ‌ ಯಡಿಯೂರಪ್ಪ ನವರಿಗೆಗೆ ನಾನು ಪಟ್ಟಿ ಕೊಡಬಲ್ಲೆ ಎಂದರು.lot-congress-activists-won-gp-election-dk-shivakumar

ಸಿಎಂ ಯಡಿಯೂರಪ್ಪ ಬೈ ಎಲೆಕ್ಷನ್ ಗೆದ್ದಿರುವ ಬಗ್ಗೆ ಹೇಳುತ್ತಿದ್ದಾರೆ. ಆಡಳಿತದಲ್ಲಿರುವ ಸರ್ಕಾರಗಳು ಬೈ ಎಲೆಕ್ಷನ್ ಗೆಲ್ಲೋದು ಸಹಜ. ನಮ್ಮ ಸರ್ಕಾರವಿದ್ದಾಗ ನಾವು ಬೈ ಎಲೆಕ್ಷನ್ ಗೆದ್ದಿರುವ ಪಟ್ಟಿಕೊಡಬೇಕೆ..? ನಮ್ಮ ಸರ್ಕಾರ ಇದ್ದಾಗ ಗೆದ್ದ ಉಪಚುನಾವಣೆಗಳಲ್ಲಿ ಗೆದ್ದ ಪಟ್ಟಿಯನ್ನು ನಾನು ನೀಡುತ್ತೇನೆ. ಆದರೆ ನಂತರ ಏನಾಯ್ತು? ಮುಂದಿನ ಬಾರಿಯೂ ಅದೇ ಆಗಲಿದೆ. 2021 ನಮ್ಮ ಕಾರ್ಯಕರ್ತರ ಪಾಲಿಗೆ ಹೋರಾಟದ ವರ್ಷ. ಪ್ರತಿ ಕ್ಷೇತ್ರದ ಸಮಸ್ಯೆ ಚರ್ಚಿಸಿ ಹೋರಾಟ ಮಾಡುತ್ತೇವೆ ಎಂದರು.

ಯತ್ನಾಳ್ ಅವರು ಹಿರಿಯ ನಾಯಕರು. ಅವರುಂಟು ಅವರ ಸಿಎಂ ಉಂಟು, ಅವರ ಬಗ್ಗೆ ನಾವು ಪ್ರತಿಕ್ರಿಯೆ ನೀಡಲ್ಲ ಎಂದರು.

Key words: lot –congress-activists – won –gp election- DK Shivakumar