ಟೆಂಪೋ ಟ್ರಾವೆಲ್ ಮಾಲೀಕನ ಬರ್ಬರ ಹತ್ಯೆ…

Promotion

ಕೆ.ಆರ್.ನಗರ,ಜೂ,23,2020(www.justkannada.in):  ಕಳೆದ ರಾತ್ರಿ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಸಾಲಿಗ್ರಾಮ ಚುಂಚನಕಟ್ಟೆ ರಸ್ತೆಯಲ್ಲಿ ಟೆಂಪೋ ಟ್ರಾವಲ್ ಮಾಲೀಕನ ಬರ್ಬರ ಹತ್ಯೆ ಮಾಡಲಾಗಿದೆ.

ಸಾಲಿಗ್ರಾಮದ ಟೆಂಪೋ ಟ್ರಾವಲರ್ ಮಾಲೀಕ ಆನಂದ್ (35) ಎಂಬ ವ್ಯಕ್ತಿಯಾಗಿದ್ದಾರೆ. ಸ್ಥಳಕ್ಕೆ ಶ್ವಾನದಳದವರನ್ನು ಕರೆಸಲಾಗಿದೆ. ಹತ್ಯೆಯನ್ನು ಮಾರೆಮಾಚಲು ಬೈಕ್ ಅಪರಾದ ರೀತಿಯಲ್ಲಿ ಬಿಂಬಸಲಾಗಿದೆ. ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕೆ.ಆರ್.ನಗರ  ವೃತ್ತ ನಿರೀಕ್ಷಕ ರಾಜು.ಉಪನಿರೀಕ್ಷಕ ಚೇತನ್ .ಸಾಲಿಗ್ರಾಮ ಉಪ ಠಾಣೆಯ ಉಪನಿರಕ್ಷಕಿ ಆರತಿ ಮತ್ತು ಶ್ವಾನದಳ ಸ್ಥಳಕ್ಕೆ ಬೇಟಿ ನೀಡಿ ಪರೀಶೀಲಿನೆ ನಡೆಸಿದರು.

ಈ ಹತ್ಯೆ ಪ್ರಕರಣ ಬಹಳ ನಿಗೂಡ ವಾಗಿದ್ದು ಹಣಕಾಸಿನ ವಿಚಾರಕ್ಕೋ ಇಲ್ಲ ಇನ್ನು ಯಾವ ಕಾರಣಕ್ಕೆ ನಡೆದಿದೆ ಎಂಬುದರವ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

Key words: kr nagra- murder – Tempo Travel -owner.