ಕೋಟಿಗೊಬ್ಬ-3 ಬಿಡುಗಡೆಯಾಗದ ಹಿನ್ನೆಲೆ:  ಚಿತ್ರಮಂದಿರದ ಮೇಲೆ ಅಭಿಮಾನಿಗಳಿಂದ ಕಲ್ಲು ತೂರಾಟ.

Promotion

ವಿಜಯಪುರ,ಅಕ್ಟೋಬರ್,14,2021(www.justkannada.in):  ಇಂದು ಬಿಡುಗಡೆಯಾಗಬೇಕಿದ್ದ  ನಟ ಕಿಚ್ಚ ಸುದೀಪ್  ಅವರ ಅಭಿನಯದ ಕೋಟಿಗೊಬ್ಬ-3 ರಿಲೀಸ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಶೋ ರದ್ದಾಗಿದ್ದರಿಂದಾಗಿ  ಬೆಳಗಾವಿ ಹಾಗೂ ವಿಜಯಪುರದಲ್ಲಿ ಅಭಿಮಾನಿಗಳು  ಪ್ಲೆಕ್ಸ್ ಹರಿದು ಚಿತ್ರಮಂದಿರಗಳ ಮೇಲೂ ಕಲ್ಲು ತೂರಾಟ  ನಡೆಸಿರುವ ಘಟನೆ ನಡೆದಿದೆ.

ವಿಜಯಪುರದ ಡ್ರೀಮ್ ಲ್ಯಾಂಡ್ ಚಿತ್ರಮಂದಿರಕ್ಕೆ ನಟ ಸುದೀಪ್  ಅಭಿಮಾನಿಗಳ ದಂಡೇ ಆಗಮಿಸಿತ್ತು. ಕೋಟಿಗೊಬ್ಬ-3 ಚಿತ್ರ ಬಿಡುಗಡೆ ಹಿನ್ನಲೆಯಲ್ಲಿ ಟಿಕೆಟ್ ಕೂಡ ನೀಡಲಾಗಿತ್ತು. ಆದರೆ ನಿರೀಕ್ಷೆಯಂತೆ ಕೋಟಿಗೊಬ್ಬ-3 ಚಿತ್ರ  ಇಂದು ಬಿಡುಗಡೆಯಾಗಿಲ್ಲ.  ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಕಲ್ಲು ತೂರಾಟ ನಡೆಸಿ  ದಾಂದಲೆ  ಮಾಡಿದ್ದಾರೆ ಎನ್ನಲಾಗಿದೆ.

ಚಿತ್ರಮಂದಿರಗಳ ಮುಂದೆ ಹಾಕಿದ್ದಂತ ಫ್ಲೆಕ್ಸ್ ಹರಿದು ಹಾಕಿದ್ದಲ್ಲದೇ, ಕೋಟಿಗೊಬ್ಬ-3 ಚಿತ್ರ ಬಿಡುಗಡೆ ಆಗದೇ ಇದ್ದರಿಂದಾಗಿ ಚಿತ್ರಮಂದಿರಗಳ ಮೇಲೆ ಕಲ್ಲು ತೂರಾಟ ಕೂಡ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ದಾಂದಲೆ ನಡೆಸುತ್ತಿದ್ದ ಹುಡಗರನ್ನ  ಲಾಠಿ ಚಾರ್ಜ್ ಮಾಡಿ ಚದುರಿಸಿದರು.

Key words: kotigobba-3- unreleased-Rolling -stone – fans – cinema theatre