ವಿಮಾ ರಂಗದಲ್ಲಿ ವಿದೇಶಿ ನೇರ ಹೂಡಿಕೆ ಮಿತಿ ಹೆಚ್ಚಳ ಪ್ರಸ್ತಾಪಕ್ಕೆ ಖಂಡನೆ….

Promotion

ಮೈಸೂರು,ಫೆಬ್ರವರಿ,1,2021(www.justkannada.in): ಕೇಂದ್ರ ಸರ್ಕಾರವು ತನ್ನ 2021ರ ಬಜೆಟ್ ಪ್ರಸ್ತಾವನೆಯಲ್ಲಿ ವಿಮಾ ರಂಗದಲ್ಲಿ ವಿದೇಶಿ ನೇರ ಹೂಡಿಕೆ ಮಿತಿಯನ್ನು ಈಗಿರುವ ಶೇ.49 ರಿಂದ ಶೇ.74ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಿರುವುದನ್ನು ಮೈಸೂರು ವಿಭಾಗದ ವಿಮಾ ನೌಕರರು ಮತ್ತು ಅಧಿಕಾರಿಗಳ ಜಂಟಿ ವೇದಿಕೆ ಉಗ್ರವಾಗಿ ಖಂಡಿಸಿದೆ. Insurance-arena-Condemnation-foreign-direct- investment-limit-increase-proposal….

ಹಾಗೆಯೇ, ಈ ಬಜೆಟ್ ನಲ್ಲಿ ಎಲ್. ಐ. ಸಿ. ಕಾಯಿದೆ 1938ಕ್ಕೆ ತಿದ್ದುಪಡಿ ತರುವ ಮೂಲಕ ಎಲ್. ಐ. ಸಿ. ಯ ಷೇರು ಮಾರಾಟವನ್ನು ಮಾಡಲು ಸರ್ಕಾರ ಮಾಡಿರುವ ಪ್ರಸ್ತಾಪವನ್ನು ಸಹ ತೀವ್ರವಾಗಿ ಖಂಡಿಸುತ್ತಿದೆ. ಭಾರತ ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಅತ್ಯದ್ಭುತ ಕೊಡುಗೆ ನೀಡುತ್ತಿರುವ ಎಲ್. ಐ. ಸಿ. ಯನ್ನು ಸಾರ್ವಜನಿಕ ವಲಯದಲ್ಲಿಯೇ ಉಳಿಸಬೇಕು, ವಿದೇಶಿ ನೇರ ಹೂಡಿಕೆ ಮಿತಿ ಹೆಚ್ಚಳದ ಪ್ರಸ್ತಾಪವನ್ನು ಹಿಂಪಡೆಯಬೇಕು ಎಂದು ಜಂಟಿ ವೇದಿಕೆ ಆಗ್ರಹಿಸಿದೆ.  Insurance-arena-Condemnation-foreign-direct- investment-limit-increase-proposal….ಮೈಸೂರು ವಿಭಾಗದ ಎಲ್ಲಾ ಎಲ್. ಐ. ಸಿ. ಕಛೇರಿಗಳ ಎದುರು ಇಂದು ಮಧ್ಯಾಹ್ನ ಭೋಜನ ವಿರಾಮ ವೇಳೆಯಲ್ಲಿ ಒಂದು ಮಿಂಚಿನ ಬೃಹತ್ ಪ್ರತಿಭಟನಾ ಪ್ರದರ್ಶನ ಹಮ್ಮಿಕೊಳ್ಳಲಾಯಿತು. ಎಲ್. ಐ. ಸಿ.,ಮೈಸೂರು ವಿಭಾಗೀಯ ಕಚೇರಿ ಬಳಿ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಎಸ್. ಎಸ್. ನಾಗೇಶ್, ಎಸ್. ವೆಂಕಟರಾಮನ್ ಮತ್ತು ಜೆ. ಸುರೇಶ್ ಮಾತನಾಡಿದರು.

key words : Insurance-arena-Condemnation-foreign-direct- investment-limit-increase-proposal….