ಮಂಗಳೂರು ವಿವಿ ಬಳಿ ಅಕ್ರಮ ಡ್ರಗ್ಸ್ ಸಾಗಾಟ ಜಾಲ ಪತ್ತೆ.

Promotion

ಮಂಗಳೂರು,ಫೆಬ್ರವರಿ,25,2022(www.justkannada.in): ಮಂಗಳೂರು ವಿವಿ ಬಳಿ ಅಕ್ರಮ ಡ್ರಗ್ಸ್ ಸಾಗಾಟ ಜಾಲ ಪತ್ತೆಯಾಗಿದ್ದು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಅಮೀರ್, ಫರ್ವೀಜ್, ಅನ್ನಿಫ್ ಮೂವರನ್ನ ಬಂಧಿಸಲಾಗಿದೆ. ಬಂಧಿತರಿಂದ 3.60 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಬಂಧಿತ ಮೂವರು ಕೇರಳಾದ ಕಾಸರಗೂಡಿನವರಾಗಿದ್ದು, ಮಂಗಳೂರಿನ ಕೊಣಾಜೆಯ ವಿವಿಯ ಮುಖ್ಯದ್ವಾರದ ಬಳಿ ಅಕ್ರಮವಾಗಿ ಡ್ರಗ್ಸ್ ಮಾರಾಟಕ್ಕೆ ಮುಂದಾಗಿದ್ದರು.

ಈ ವೇಳೆ ಮೂವರನ್ನ  ಪೊಲೀಸರು ಬಂಧಿಸಿದ್ದು ಈ ಕುರಿತು ಕೊಣಾಜೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Illegal-Drugs – Detected – Mangalore