ಕೆಆರ್ ಎಸ್ ಸುತ್ತಮುತ್ತಲಿನ 28 ಕಲ್ಲುಗಣಿಗಾರಿಕೆ ಮಾಲೀಕರಿಗೆ ರಿಲೀಫ್ ನೀಡಿದ ಹೈಕೋರ್ಟ್.

ಬೆಂಗಳೂರು,ಸೆಪ್ಟಂಬರ್,16,2021(www.justkannada.in):  ಕೆಆರ್​ಎಸ್ ಸುತ್ತಮುತ್ತಲಿನ 28 ಕಲ್ಲು ಗಣಿಗಾರಿಕೆ ಮಾಲೀಕರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್  ನೀಡಿದೆ.

ಹೌದು,  ಕಾನೂನು ಪ್ರಕ್ರಿಯೆ ಪಾಲಿಸದೇ ಗಣಿಗಾರಿಕೆಯ ಲೈಸೆನ್ಸ್ ರದ್ದು ಮಾಡಿದ್ದ ಮಂಡ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದೆ. ಲೈಸೆನ್ಸ್ ರದ್ದಿಗೆ ಮುನ್ನ ಕಾನೂನು ಪ್ರಕ್ರಿಯೆ ಪಾಲಿಸಲು ಕೋರ್ಟ್ ಸೂಚನೆ ನೀಡಿದ್ದು, ಗಣಿ ಮಾಲೀಕರಿಗೆ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಿ ಅವರ ವಾದವನ್ನೂ ಆಲಿಸಿದ ನಂತರ ತೀರ್ಮಾನಿಸಿ ಎಂದು  ಹೇಳಿದೆ.

ಅಲ್ಲದೆ ಕ್ಷಮ ಪ್ರಾಧಿಕಾರ ಲೈಸೆನ್ಸ್ ಬಗ್ಗೆ ತೀರ್ಮಾನಿಸಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ 28 ಕಲ್ಲುಗಣಿಗಾರಿಕೆ ಮಾಲೀಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

Key words: High Court – relief – quarry owners – around- KRS.