ಹೆಡ್, ಮ್ಯಾಕ್ಸ್’ವೆಲ್ ಪತ್ನಿ-ಮಕ್ಕಳ‌ ಮೇಲೆ ಅತ್ಯಾಚಾರ ಬೆದರಿಕೆ: ಟೀಂ‌ ಇಂಡಿಯಾ ಫ್ಯಾನ್ಸ್ ನಡೆಗೆ ಆಕ್ರೋಶ

Promotion

ಬೆಂಗಳೂರು, ನವೆಂಬರ್ 21, 2023 (www.justkannada.in): ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ಪರ  137 ರನ್ ಗಳಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಆಗಿದ್ದ ಟ್ರಾವಿಸ್ ಹೆಡ್ ಅವರ ಪತ್ನಿ ಹಾಗೂ ಮಗಳಿಗೆ ಅತ್ಯಾಚಾರದ ಬೆದರಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾಗುತ್ತಿದೆ.

ಮ್ಯಾಕ್ಸ್‌ವೆಲ್ ಅವರ ಪತ್ನಿ ವಿನಿ ರಾಮನ್, ಭಾರತೀಯರಾಗಿದ್ದರೂ ಆಸೀಸ್‌ಗೆ ಬೆಂಬಲ ನೀಡಿದ್ದಕ್ಕಾಗಿ ನಿಂದನೆ ಮತ್ತು ಬೆದರಿಕೆ ಹಾಕಲಾಗುತ್ತಿದೆ.

ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ವಿನಿ ರಾಮನ್ ಫೋಸ್ಟ್ ಮಾಡಿದ್ದು, ಬೇಸರದ ಜತಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿಲ್ ಮಾತ್ರೆ ತೆಗೆದುಕೊಳ್ಳಿ, ಹೆಚ್ಚಿನ ಮುಖ್ಯವಾದ ವಿಷಯದ ಕಡೆಗೆ ಆ ಆಕ್ರೋಶವಿರಲಿ, ಅದು ಬಿಟ್ಟು ಬೇರೆ ರೀತಿ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಚಾಟಿ ಬೀಸಿದ್ದಾರೆ.