ಗುಜರಾತ್ ವಿಧಾನಸಭೆ: ನಾಳೆ 2ನೇ ಹಂತದ ಮತದಾನ ಪ್ರಕ್ರಿಯೆ

Promotion

ಬೆಂಗಳೂರು, ಡಿಸೆಂಬರ್ 04, 2022 (www.justkannada.in): ಗುಜರಾತ್ ವಿಧಾನಸಭೆಯ 93 ಕ್ಷೇತ್ರಗಳಿಗೆ ನಾಳೆ 2ನೇ ಹಂತದ ಚುನಾವಣೆ ನಡೆಯಲಿದೆ.

ಒಟ್ಟು 182 ಕ್ಷೇತ್ರಗಳಿರುವ ಗುಜರಾತ್ ವಿಧಾನಸಭೆಗೆ ಡಿ. 1ರಂದು 89 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದಿತ್ತು.

63.14ರಷ್ಟು ಮತದಾನವಾಗಿದೆ. ಎರಡನೇ ಹಂತದ ಚುನಾವಣೆಯಲ್ಲಿ ಅಹಮದಾಬಾದ್ ಸೇರಿದಂತೆ ಹಲವಾರು ಮಹತ್ವದ ಕ್ಷೇತ್ರಗಳಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಮಂದಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಅಮ್‍ಆದ್ಮಿ ಪಕ್ಷ ಕೂಡ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡುತ್ತಿದ್ದು, ಚುನಾವಣಾ
ಕಣ ರಂಗೇರಿತ್ತು. ನಿನ್ನೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ.