ಮೊಟ್ಟೆ ಎಸೆತ ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿ- ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಕಿಡಿ.

Promotion

ಬೆಂಗಳೂರು,ಆಗಸ್ಟ್,19,2022(www.justkannada.in):  ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿಯಾಗಿದೆ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಕಿಡಿಕಾರಿದರು.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ವಿ.ಎಸ್ ಉಗ್ರಪ್ಪ,  ಮೊಟ್ಟೆ ಎಸೆಯುವುದು ಆರ್ ಎಸ್ ಎಸ್ ಹೊಸ  ಸಂಸ್ಕೃತಿ . ಮೊಟ್ಟೆ ಎಸೆತ ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿ. ಮೊಟ್ಟೆ ಎಸೆತ ಒಂದು ವ್ಯವಸ್ಥಿತ ಸಂಚು. ಇದು ಸಿದ್ಧರಾಮಯ್ಯಗಷ್ಟೇ ಅಲ್ಲ ಕಾಂಗ್ರೆಸ್ ಗೂ ಮಾಡಿದ ಅಪಮಾನ. ಸ್ವಾಭಿಮಾನಿ ಕಾಂಗ್ರೆಸ್ ಕಾರ್ಯಕರ್ತರನ್ನ ಕೆಣಕಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಹಾಗೆಯೇ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ರಾಜೀನಾಮೆಗೆ ವಿ.ಎಸ್ ಉಗ್ರಪ್ಪ ಆಗ್ರಹಿಸಿದರು.

Key words: Egg -throwing – attack –democracy-V.S Ugrappa