‘ಕುರುಕ್ಷೇತ್ರ’ ಡೈಲಾಗ್’ಗಳಿಗೆ ಟಿಕ್’ಟಾಕ್ ಮಾಡಿ ಬಹುಮಾನ ಗೆಲ್ಲಿ !

Promotion

ಬೆಂಗಳೂರು, ಜುಲೈ 26, 20118 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ಕುರುಕ್ಷೇತ್ರ ಚಿತ್ರತಂಡ ಅಭಿಮಾನಿಗಳಿಗೆ ಬಂಪರ್ ಆಫರ್ ಒಂದನ್ನು ನೀಡಿದೆ.

ಕುರುಕ್ಷೇತ್ರ ಚಿತ್ರಕ್ಕೆ ಸಂಬಂಧಿಸಿದ ಟಿಕ್ ಟಾಕ್ ಮಾಡಿ ಕಳುಹಿಸಿ ಬಹುಮಾನ ಗೆಲ್ಲುವ ಅವಕಾಶ ಒದಗಿಬಂದಿದೆ. ಕುರುಕ್ಷೇತ್ರ ಚಿತ್ರಕ್ಕೆ ಸಂಬಂಧಿಸದ ಡೈಲಾಗ್ ಮತ್ತು ಹಾಡುಗಳಿಗೆ ಟಿಕ್ ಟಾಕ್ ಮಾಡಬೇಕು. ಈ ವಿಡಿಯೋವನ್ನು ಕುರುಕ್ಷೇತ್ರ ಮತ್ತು ಡಿಬಾಸ್ ಎಂದು ಹ್ಯಾಶ್ ಟ್ಯಾಗ್ ಹಾಕಿ ಪೋಸ್ಟ್ ಮಾಡಬೇಕು.

ಮುಂದಿನ ತಿಂಗಳು ಆಗಸ್ಟ್ 5 ಒಳಗೆ ವಿಡಿಯೋವನ್ನು ಪೋಸ್ಟ್ ಮಾಡಬೇಕು. ಅಂದ್ಹಾಗೆ ಕೇವಲ 15 ಜನ ಉತ್ತಮರನ್ನು ಮಾತ್ರ ಆಯ್ಕೆ ಮಾಡಲಾಗುತ್ತೆ. ಆಗಸ್ಟ್ 7ಕ್ಕೆ ವಿನ್ನರ್ಸ್ ಅನೌನ್ಸ್ ಮಾಡಲಾಗುತ್ತೆ.