ನಾಳೆಯಿಂದ ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಸಕಲ ವ್ಯವಸ್ಥೆ

Promotion

ಬೆಂಗಳೂರು, ಜೂನ್ 07, 2020 (www.justkannada.in): ಧರ್ಮಸ್ಥಳದಲ್ಲಿ ಮಂಜುನಾಥನ ಸ್ವಾಮಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಜೂನ್ 8 ರಿಂದ ಧಾರ್ಮಿಕ ಸ್ಥಳ ಮಂದಿರಗಳು ತೆರೆಯಲಿದ್ದು, ಅದರಂತೆ ಭಕ್ತರಿಗೆ ನಾಳೆಯಿಂದ ಧರ್ಮಸ್ಥಳ ದೇವಾಲಯ ಪ್ರವೇಶ ಮುಕ್ತವಾಗಲಿದ್ದು, ಮುಂಜಾಗೃತಾ ಕ್ರಮಗಳೊಂದಿಗೆ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವುದಕ್ಕಾಗಿ ದೈಹಿಕ ಅಂತರ, ಮಾಸ್ಕ್ ಮತ್ತು ಗ್ಲೌಸ್ ಬಳಕೆ, ಶುಚಿತ್ವ ಕಾಪಾಡುವುದು ಸೇರಿದಂತೆ ಕೆಲ ಸಾಮಾನ್ಯ ನಿಯಮಗಳು ಕಡ್ಡಾಯವಾಗಿ ಅನ್ವಯವಾಗುತ್ತವೆ.
ಲಾಕ್ ಡೌನ್ ಹಿನ್ನೆಲೆ 2 ತಿಂಗಳು ಕಾಲ ದೇವಾಲಯ ಪ್ರವೇಶ ನಿರ್ಬಂಧಿಸಲಾಗಿತ್ತು, ಆದರೆ ಲಾಕ್ ಡೌನ್ ಸಡಿಲಗೊಳಿಸಿ ದೇವಾಲಯಗಳನ್ನು ತೆರೆಯಲು ಜೂನ್ 8 ರಿಂದ ಸರ್ಕಾರ ಅನುಮತಿ ನೀಡಿದೆ.