22 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗಳು.

Promotion

ಚಿಕ್ಕಮಗಳೂರು, ಜನವರಿ,4,2022(www.justkannada.in):  22 ವರ್ಷಗಳ ಬಳಿಕ ಮಗಳು ತಾಯಿಯ ಮಡಿಲು ಸೇರಿರುವ ಮಲಕಲಕುವ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲಿ ನಡೆದಿದೆ.

9ನೇ ವಯಸ್ಸಲ್ಲಿ ನಾಪತ್ತೆಯಾಗಿದ್ದ ಮಗಳು ಅಂಜಲಿ, ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಕೇರಳದ ನೆಲ್ಲಮಣಿಯ ಸಾಜಿ ಜತೆ ವಿವಾಹವಾಗಿದ್ದಾರೆ. ಕಳೆದ 3 ವರ್ಷದಿಂದ ಅಂಜಲಿ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಕಳೆದ 3 ವರ್ಷದಿಂದ ಅಂಜಲಿ ಅವರು ಪತಿಯೊಂದಿಗೆ ಸೇರಿ ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದರು. ಮಂಗಳೂರಿನ ಫಿಶ್‌ ಮೋಣು, ಮುಸ್ತಾಫರ ಬಳಿ ಈ ಬಗ್ಗೆ ವಿಚಾರಿಸಿದ್ದರು. ಈ ಮಧ್ಯೆ ಮೂಡಿಗೆರೆ ಸುತ್ತಮುತ್ತ ತಾಯಿಗಾಗಿ ಹುಡುಕಾಡಿದ್ದು, ಕೊನೆಗೂ ಮೂಡಿಗೆರೆಯ ಮುದ್ರೆಮನೆಯಲ್ಲಿ ಅವರು ತಾಯಿ ಪತ್ತೆಯಾಗಿದ್ದಾರೆ. ತಾಯಿಯನ್ನ  ಭೇಟಿಯಾಗುತ್ತಿದ್ದಂತೆ ಮಗಳು ತಬ್ಬಿ ಕಣ್ಣೀರಿಟ್ಟಿದ್ದಾರೆ.

ಅಂಜಲಿ 9ನೇ ವಯಸ್ಸಿನಲ್ಲಿ ಕಾಣೆಯಾಗಿದ್ದರು. ಆದರೆ ತಂದೆ- ತಾಯಿ ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರಲಿಲ್ಲ ಎಂದು ತಿಳಿದುಬಂದಿದೆ. ನಾಲ್ಕು ವರ್ಷಗಳ ಹಿಂದೆ ಅಂಜಲಿ ತಂದೆ ಮೃತಪಟ್ಟಿದ್ದು, ಆಕೆಯ ತಾಯಿ ಮಾಹಿತಿ ನೀಡಿದ್ದಾರೆ. ತಾಯಿ ಕಣ್ಣಿಗೆ ಬೀಳುತ್ತಿದ್ದಂತೆ ಅಂಜಲಿ ಓಡಿ ಹೋಗಿ ಅಪ್ಪಿಕೊಂಡಿದ್ದಾರೆ. ಈ ದೃಶ್ಯ ಮನಕಲಕುವಂತಿದೆ.

Key words: daughter- joined -her mother- after- 22 years.