ದಸರಾ ನಿಯಮ ಪಾಲನೆ ಕಡ್ಡಾಯ: ಎಲ್ಲರಿಗೂ ಕರೋನಾ ಪರೀಕ್ಷೆ- ಗಜಪಡೆ ವೀಕ್ಷಣೆ ಮಾಡಿದ ಸಚಿವ ಎಸ್. ಟಿ ಎಸ್.ಟಿ ಸೋಮಶೇಖರ್…

ಮೈಸೂರು,ಅಕ್ಟೋಬರ್,16,2020(www.justkannada.in):  ತಜ್ಞರ ತಂಡ ಹಾಗೂ ಕೇಂದ್ರ ಸರ್ಕಾರ ರೂಪಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದೇವೆ. ದಸರಾದಲ್ಲಿ ಪಾಲ್ಗೊಳ್ಳಲು ಸಚಿವರು ಸೇರಿದಂತೆ ಎಲ್ಲರದ್ದೂ ಕೊರೋನಾ ಪರೀಕ್ಷೆ ಮಾಡಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಹೇಳಿದರು.dasara-rule-compulsory-corona-test-all-minister-st-somashekhar

ಗಜೆಪಡೆ ವೀಕ್ಷಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಅಲ್ಲದೆ, ದಸರಾವನ್ನು ಸರಳವಾಗಿ ಹಾಗೂ ಹೆಚ್ಚಿನ ಜನ ಸೇರದಂತೆ ಆಚರಿಸಬೇಕೆಂಬ ಸೂಚನೆ ಇರುವ ಹಿನ್ನೆಲೆಯಲ್ಲಿ ಅದೇ ರೀತಿಯಾಗಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು  ತಿಳಿಸಿದರು.

ಅ.26 ರಂದು ಜಂಬೂಸವಾರಿ ನಡೆಯಲಿರುವ ಹಿನ್ನೆಲೆಯಲ್ಲಿ ವ್ಯವಸ್ಥೆಗಳನ್ನು ವೀಕ್ಷಿಸಲು ಇಲ್ಲಿನ ಶಾಸಕರಾದ ರಾಮದಾಸ್, ನಾಗೇಂದ್ರ ಹಾಗೂ ಮುಡಾ ಅಧ್ಯಕ್ಷರಾದ ರಾಜೀವ್ ಜೊತೆ ಬಂದಿದ್ದೇನೆ. ನಿನ್ನೆಯೂ ಸಹ ಚಾಮುಂಡಿ ಬೆಟ್ಟದಲ್ಲಿನ ವ್ಯವಸ್ಥೆಗಳ ಬಗ್ಗೆ ವೀಕ್ಷಣೆ ಮಾಡಿ ಬಂದಿದ್ದೇವೆ. ಈಗ ಮತ್ತೆ ಅಲ್ಲಿಗೆ ಭೇಟಿ ನೀಡುತ್ತಿದ್ದು, ಅಂತಿಮ ವ್ಯವಸ್ಥೆಯನ್ನು ಪರಿಶೀಲನೆ ನಡೆಸುತ್ತೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.dasara-rule-compulsory-corona-test-all-minister-st-somashekhar

ಮುಖ್ಯಮಂತ್ರಿಗಳು ಇಂದು ಮೈಸೂರಿಗೆ ಆಗಮಿಸುತ್ತಿದ್ದು, ಕೋವಿಡ್ ಹಾಗೂ ದಸರಾ ಬಗ್ಗೆ ಅವರು ಚರ್ಚೆ ನಡೆಸಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಮೂರ್ನಾಲ್ಕು ಸಚಿವರು ಮಾತ್ರ ಸದ್ಯ ಉದ್ಘಾಟನೆಗೆ ಬರಲಿದ್ದಾರೆ ಎಂಬ ಮಾಹಿತಿ ಇದೆ. ಉಳಿದವರು ಜಂಬೂಸವಾರಿ ಸಂದರ್ಭದಲ್ಲಿ ಸಿಎಂ ಜೊತೆ ಬರಲಿರುವುದಾಗಿ ಹೇಳಿರುವುದಾಗಿ

ಪ್ರತಿ ವರ್ಷದಂತೆ ಆಮಂತ್ರಣ ಮುದ್ರಣ…

ಪ್ರತಿ ಪ್ರತಿವರ್ಷ ದಸರಾ ಸಂದರ್ಭದಲ್ಲಿ ಯಾವ ರೀತಿ ಆಮಂತ್ರಣ ಪತ್ರಿಕೆ ಆಗುತ್ತಿತ್ತೋ ಅದೇ ರೀತಿ ಈ ವರ್ಷವೂ ಆಗಿದೆ. ನಾನು ಎಲ್ಲೂ ಸಹ ಬದಲಾವಣೆ ಮಾಡಿಲ್ಲ ಎಂದು ಆಮಂತ್ರಣ ಪತ್ರಿಕೆಯಲ್ಲಿ ವಿರೋಧ ಪಕ್ಷದ ನಾಯಕರ ಹೆಸರು ಸೇರಿಸಿಲ್ಲ ಎಂಬ ಆರೋಪಕ್ಕೆ ಸಚಿವರು ಸ್ಪಷ್ಟನೆ ನೀಡಿದರು.

ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಗೆಲುವು ನಿಶ್ಚಿತ

ರಾಜರಾಜೇಶ್ವರಿ ನಗರದ ಉಸ್ತುವಾರಿ ನಾನಿದ್ದೇನೆ. ದಸರಾ ಕಾರ್ಯಕ್ರಮಗಳ ಮಧ್ಯೆಯೇ ಅಲ್ಲಿಗೂ ಹೋಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಅಲ್ಲಿ ಮುನಿರತ್ನ ಅವರ ಗೆಲುವು ನಿಶ್ಚಿತ ಎಂದು ಸಚಿವರ ಎಸ್.ಟಿ ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.

ಮುನಿರತ್ನ ಅವರು ಸಾಕಷ್ಟು ಜನಪ್ರಿಯ ಕೆಲಸಗಳನ್ನು ಮಾಡಿದ್ದಾರೆ. ಕೋಟ್ಯಂತರ ರೂಪಾಯಿಯನ್ನು ತಂದು ಅಭಿವೃದ್ಧಿ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರು ಕ್ಷೇತ್ರದ ಪ್ರತಿ ಮನೆಗೂ ಆಹಾರ ಕಿಟ್ ಗಳನ್ನು ನೀಡಿದ್ದಾರೆ. ಸಾಕಷ್ಟು ಅನ್ನದಾನವನ್ನು ಮಾಡಿದ್ದಾರೆ. ಹೀಗಾಗಿ ಮುನಿರತ್ನ ಅವರು ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟು ಮತ ಕೇಳಿದರೆ, ನಾವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿಯನ್ನು ಮುಂದಿಟ್ಟು ಜನರ ಬಳಿ ಹೋಗುತ್ತೇವೆ ಎಂದು ಸಚಿವರು ತಿಳಿಸಿದರು.

ದಸರಾದ ಪ್ರಮುಖ ಆಕರ್ಷಣೆಯಾದ ಗಜೆಪಡೆಗಳ ವೀಕ್ಷಣೆಗೆಂದು ಅರಮನೆಯ ಆನೆ ಬಿಡಾರಕ್ಕೆ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಅಂಬಾರಿ ಆನೆ ಅಭಿಮನ್ಯು, ವಿಕ್ರಮ, ಗೋಪಿ, ವಿಜಯ, ಕಾವೇರಿ ಆನೆಗಳಿಗೆ ಕಬ್ಬು – ಬೆಲ್ಲಗಳನ್ನು ನೀಡಿದರು. ಈ ವೇಳೆ ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್ ಇದ್ದರು.

Key words: Dasara-rule –compulsory- Corona test –all-Minister -ST Somashekhar.