ಮೈಸೂರಿನಲ್ಲಿ  ದಸರಾ ಗಾಳಿಪಟ ಉತ್ಸವ: ಎಲ್ಲರ ಕಣ್ಮನ ಸೆಳೆದ ವಿವಿಧ ಬಗೆಯ ಪಟಗಳು…

ಮೈಸೂರು,ಅ,12,2019(www.justkannada.in):  ಆಕಾಶದೆತ್ತರದಲ್ಲಿ ನೋಡುಗರ ಗಮನ ಸೆಳೆದ ವಿವಿಧ ಬಗೆಯ ಗಾಳಿಪಟಗಳು, ಹುಲಿ, ಅಕ್ಟೋಪಸ್, ಮಿಕ್ಕಿಮೌಸ್, ಸ್ಟಂಟ್ ಕೈಟ್, ಗರುಡ ವಿವಿಧ ರೀತಿಯ ಗಾಳಿಪಟಗಳ ಹಾರಾಟ ನೋಡಿ ಕಣ್ತುಂಬಿಕೊಂಡ ಜನರು, ಇದೆಲ್ಲಾ ನಡೆದಿದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ

ಜಿಲ್ಲಾಡಳಿತ  ಹಾಗೂ ಪ್ರವಾಸೋದ್ಯಮ ಉಪ ಸಮಿತಿ ವತಿಯಿಂದ ಇಂದಿನಿಂದ ಎರಡು ದಿನಗಳ ಕಾಲ ದಸರಾ ಗಾಳಿಪಟ ಉತ್ಸವ  ಆಯೋಜಿಸಲಾಗಿದೆ. ನಗರದ ಲಲಿತ್ ಮಹಲ್ ಹೆಲಿಪ್ಯಾಡ್ ಬಳಿ ಗಾಳಿಪಟ ಉತ್ಸವ ಕಾರ್ಯಕ್ರಮಕ್ಕೆ ಮೇಯರ್ ಪುಷ್ಬಲತಾ ಜಗನ್ನಾಥ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಏಳು ತಂಡಗಳು  ಬಗೆ ಬಗೆ ಗಾಳಿಪಟಗಳ ಹಾರಾಟ ನಡೆಸಿದರು. 8 ತಂಡದಲ್ಲಿ 36 ಜನ ವೃತ್ತಿಪರರು ಗಾಳಿಪಟ ಹಾರಾಟ ನಡೆಸಿದರು.  ಬೇರೆ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ವಡೋದರ, ಹೈದರಾಬಾದ್,  ಹಾಗೂ ಮಂಗಳೂರು , ಬೆಂಗಳೂರು, ಬೆಳಗಾವಿಯಿಂದ  ತಂಡಗಳು ಆಗಮಿಸಿದ್ದು, 250 ವಿವಿಧ ಬಗೆಯ ಗಾಳಿಪಟಗಳು ಹಾರಾಟ ನಡೆಸಿದರು.

ಪ್ರಮುಖವಾಗಿ ಹುಲಿ, ಅಕ್ಟೋಪಸ್, ಮಿಕ್ಕಿಮೌಸ್, ಸ್ಟಂಟ್ ಕೈಟ್, ಗರುಡ ಸೇರಿದಂತೆ ಅನೇಕ ಗಾಳಿ ಪಟಗಳು ವೀಕ್ಷಕರ ಗಮನ ಸೆಳೆದವು.

Key words: Dasara -Kite Festival – Mysore-Different- types -kite