“ಸಾಂಸ್ಕೃತಿಕ ನಗರಿಯಲ್ಲಿ ಡಾ.ರಾಜ್ ಕುಮಾರ್ 15ನೇ ವರ್ಷದ ಪುಣ್ಯಸ್ಮರಣೆ”

ಮೈಸೂರು,ಏಪ್ರಿಲ್,12,2021(www.justkannada.in) : ಡಾ.ರಾಜಕುಮಾರ್‌ ಕನ್ನಡದ ಕಣ್ಮಣಿಯಾಗಿ ಗುರುತಿಸಿಕೊಂಡಿದ್ದು, ಎರಡು ರಾಷ್ಟ್ರೀಯ ಪ್ರಶಸ್ತಿ, ಪದ್ಮಭೂಷಣ, ಕರ್ನಾಟಕ ರತ್ನ ಹೀಗೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಹೇಳಿದರು.cultural city,Dr.Raj Kumar,15th,Year,Good,remembrance ವಿಶ್ವಮಾನವ ಡಾ.ರಾಜ್ ಕುಮಾರ್ ಸೇವಾ ಸಮಿತಿ ವತಿಯಿಂದ ವಸ್ತುಪ್ರದರ್ಶನ ಆವರಣದಲ್ಲಿ ಡಾ.ರಾಜ್ ಕುಮಾರ್ ರವರ 15ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಡಾ.ರಾಜ್ ನೆನಪು ಕಾರ್ಯಕ್ರಮವನ್ನು ರಾಜ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗೋಕಾಕ್‌ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು, ಕನ್ನಡಕ್ಕಾಗಿ ಹೋರಾಟ ನಡೆಸಿದವರು ಐತಿಹಾಸಿಕ, ಸಾಮಾಜಿಕ, ಪೌರಾಣಿಕ, ಹಾಸ್ಯ, ಹೀಗೆ ಹಲವು ಬಗೆಯ ಪಾತ್ರಗಳ ಮೂಲಕ ತಮ್ಮದೇ ಛಾಪನ್ನು ರಾಜಕುಮಾರ್ ಭಾರತೀಯ ಸಿನಿಮಾ ರಂಗದಲ್ಲಿ ಉಳಿಸಿಹೊಗಿದ್ದಾರೆ ಎಂದು ಸ್ಮರಿಸಿದರು.

ಇಂತಹ ಮಹಾನ್ ನಟ ನಿಧನರಾಗಿ ದಶಕಗಳಿಗೂ ಹೆಚ್ಚು ವರ್ಷವಾಗುತ್ತಾ ಬಂತು, ಆದರೆ, ಇಂದಿಗೂ ಕೂಡ ರಾಜ್ ಕುಮಾರ್ ಕನ್ನಡದ ಮಟ್ಟಿಗೆ ಜೀವಂತ ಸಾಕ್ಷಿ ಪ್ರಜ್ನೆಯಾಗಿದ್ದಾರೆ. ಪ್ರತಿ ವರ್ಷ ಏಪ್ರಿಲ್ 24 ಬಂದರೆ ಸಾಕು ಕರ್ನಾಟಕದ ಮಟ್ಟಿಗೆ ಮತ್ತೊಂದು ರಾಜ್ಯೋತ್ಸವದ ರೀತಿಯಲ್ಲಿ ಆಚರಿಸಲಾಗುತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ,ಡಿ.ರಾಜಣ್ಣ  ಮಾತನಾಡಿ, ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಆಗಿದ್ದವರು ಡಾ.ರಾಜ್, ಕನ್ನಡ ಭಾಷೆಯ ಸೊಬಗು ಮತ್ತು ಸೊಗಡನ್ನು ಹೆಚ್ಚಿಸಿದವರು. ಶ್ರೇಷ್ಠ ಅಭಿನಯದ ಜೊತೆಗೆ, ಜನರಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಿದವರು. ಅವರ ಬದುಕು ಇಂದಿನ ಯುವಕರಿಗೆ ದಾರಿ ಹಾಗೂ ಮಾದರಿ ಆಗಬೇಕು ಎಂದು ಅಭಿಪ್ರಾಯಪಟ್ಟರು.cultural city-Dr.Raj Kumar-15th-Year-Good-remembranceಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ,ರಾಜ್ ಕುಮಾರ್ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಎಂ.ರಾಮೇಗೌಡ, ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷ ಬನ್ನೂರು ಮಹೇಂದ್ರಸಿಂಗ್ ಕಾಳಪ್ಪ, ಪರಮೇಶ್ ಗೌಡ ,ಡಾ.ರಾಜ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಸುಚೀಂದ್ರ,  ಜೀವಧಾರ ರಕ್ತನಿಧಿ ಕೇಂದ್ರ ನಿರ್ದೇಶಕ ಗಿರೀಶ್, ಡಾ .ರಾಜ್ ಕುಮಾರ್ ಅಭಿಮಾನಿ ಬಳಗದ ಗೌರವಾಧ್ಯಕ್ಷ ಎಂ.ಎನ್.ರಾಘವೇಂದ್ರ ರಾವ್ ಇನ್ನೂ ಅನೇಕರು ಭಾಗವಹಿಸಿದ್ದರು.

key words : cultural city-Dr.Raj Kumar-15th-Year-Good-remembrance