ಕ್ರಿಕೆಟ್: ಟಾಸ್ ಗೆದ್ದ ಆಸಿಸ್’ನಿಂದ ಫೀಲ್ಡಿಂಗ್ ಆಯ್ಕೆ, ಟೀಂ ಇಂಡಿಯಾ ಉತ್ತಮ ಆರಂಭ

Promotion

ರಾಜ್​ಕೋಟ್, ಜನವರಿ 17, 2019 (www.justkannada.in): ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಎರಡನೇ ಏಕದಿನ ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ ಉತ್ತಮ ಆರಂಭ ಕಂಡಿದೆ.

ಈಗಾಗಲೇ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆಯರೋನ್ ಫಿಂಚ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗರೂ ಪಡೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಗೆದ್ದ ಆಟಗಾರರೇ ಇಂದೂಕೂಡ ಕಣಕ್ಕಿಳಿಯುತ್ತಿದ್ದಾರೆ.

ಭಾರತ ತಂಡ ಎರಡು ಮಹತ್ವದ ಬದಲಾವಣೆ ಮಾಡಿದೆ. ಗಾಯಾಳು ರಿಷಭ್ ಪಂತ್ ಹೊರಗುಳಿದಿದ್ದು, ಇವರ ಬದಲು ಮನೀಶ್ ಪಾಂಡೆ ಹಾಗೂ ಶಾರ್ದೂಕ್ ಠಾಕೂರ್ ಬದಲು ನವ್​ದೀಪ್ ಸೈನಿ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ 7.5 ಓವರ್ ಗಳಲ್ಲಿ 41ರನ್ ಗಳಿಸಿದೆ.

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ಕೆ ಎಲ್ ರಾಹುಲ್ (ವಿಕೆಟ್- ಕೀಪರ್), ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಐಯರ್, ಮನೀಶ್ ಪಾಂಡೆ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ನವ್​ದೀಪ್ ಸೈನಿ.

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಆಯರೋನ್ ಫಿಂಚ್ (ನಾಯಕ), ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಆಸ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ (ವಿಕೆಟ್ – ಕೀಪರ್), ಆಸ್ಟನ್ ಅಗರ್, ಪ್ಯಾಟ್ ಕಮಿನ್ಸ್​, ಮಿಚೆಲ್ ಸ್ಟಾರ್ಕ್​, ಕೇನ್ ರಿಚರ್ಡಸನ್, ಆಯಡಂ ಜಂಪಾ.