ಕೊರೋನಾ ಶಂಕಿತ ವ್ಯಕ್ತಿ ಸಂದರ್ಶನಕ್ಕೆ ತೆರಳಿದ್ರೆ ಪತ್ರಕರ್ತರಿಗೆ ಮನೆಯಲ್ಲಿ ದಿಗ್ಬಂಧನ…

Promotion

ಮೈಸೂರು,ಮಾ,14,2020(www.justkannada.in):  ರಾಜ್ಯದೆಲ್ಲೆಡೆ ಕೊರೋನಾ ಭೀತಿ ಎದುರಾಗಿದ್ದು ಈ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳಿಗೊಂದು  ವಿಶೇಷ ‌ಮನವಿ ಮಾಡಿದ್ದಾರೆ.

ಕೊರೊನಾ ಶಂಕಿತ ವ್ಯಕ್ತಿಯ ಸಂದರ್ಶನ ಹಾಗೂ ಫೋಟೋ/ವೀಡಿಯೋ ಮಾಡಲು ಪತ್ರಕರ್ತರು ತೆರಳಿದರೆ ಅಂತಹ ಪತ್ರಕರ್ತರನ್ನೂ ಸಹ ಮನೆಯಲ್ಲಿ ದಿಗ್ಬಂಧನ(home quarantine)ದಲ್ಲಿ 14 ದಿನಗಳ ಕಾಲ ಇರಿಸಲಾಗುತ್ತದೆ. ಆದ್ದರಿಂದ ಯಾರೂ ಸಹ ಅಂತಹ ಪ್ರಯತ್ನ ಮಾಡಬಾರದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್  ಹೇಳಿದ್ದಾರೆ.

ಹಾಗೆಯೇ ಕೊರೊನಾ ಬಗ್ಗೆ ಯಾವುದೇ ಪ್ರಕರಣ ಪತ್ತೆಯಾದರೂ ಸಹ ಸಾರ್ವಜನಿಕರ ಮಾಹಿತಿಗಾಗಿ ಸರ್ಕಾರವೇ ಮಾಹಿತಿ ನೀಡುತ್ತದೆ. ಆದ್ದರಿಂದ ಯಾರೂ ಕೂಡ ಅನಧಿಕೃತವಾಗಿ ಸಿಗುವ ಮಾಹಿತಿಯನ್ನು ನಂಬಬಾರದು ಹಾಗೂ ಪ್ರಕಟಿಸಬಾರದು ಎಂದು ಕೋರುತ್ತೇನೆಂದು ಮೈಸೂರು ಡಿಸಿ ತಿಳಿಸಿದ್ದಾರೆ.

Key words: Corona- suspects – interview- journalists – home quarantine