ಕಾಂಗ್ರೆಸ್ ಬಿಟ್ಟು ಬಂದಿದ್ದಕ್ಕೆ ತೇಜೋವಧೆಗೆ ಯತ್ನ : ಸಚಿವ ಬಿ.ಶ್ರೀರಾಮುಲು ಆರೋಪ

Promotion

ಬೆಂಗಳೂರು,ಮಾರ್ಚ್,07,2021(www.justkannada.in) : ಕಾಂಗ್ರೆಸ್ ಬಿಟ್ಟು ಬಂದಿದ್ದಕ್ಕೆ ತೇಜೋವಧೆ ಮಾಡಲಾಗುತ್ತಿದೆ. ಹಿಂದುಗಡೆ ನಿಂತು ಕೆಲವು ಮಂದಿ ಮಾಡಿದ ಕೆಲಸ ಇದಾಗಿದೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.jkರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಯಲು ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಯಾರೋ ಹಿಂದೆ ನಿಂತು ಇದನ್ನೆಲ್ಲ ಮಾಡಿಸುತ್ತಿದ್ದಾರೆ. ತನಿಖೆಯ ನಂತರ ಸತ್ಯಾಸತ್ಯ ಹೊರಗೆ ಬರಲಿದೆ. ರಮೇಶ್ ಬಿಜೆಪಿ ಸರ್ಕಾರ ಆರಚನೆಗೆ ಕಾರಣರಾದವರು. ಹೀಗಾಗಿ, ಅವರ ತೇಜೋವಧೆ ಮಾಡಲಾಗುತ್ತಿದೆ ಎಂದಿದ್ದಾರೆ.

Free,Promotion,those,who,speak,morality?-,Minister,B.Sriramulu

ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅವರ ವಿರುದ್ಧ ಸಾಕಷ್ಟು ಪ್ರಕರಣಗಳಿವೆ. ಬಳಿಕ ನಮ್ಮ ಸಚಿವರ ರಾಜೀನಾಮೆ ಕೇಳಲಿ. ಸಿಎಂ ಯಡಿಯೂರಪ್ಪ 8ನೇ ಬಾರಿ ಬಜೆಟ್ ಮಂಡಿಸಲಿದ್ದು, ಅವರು ಜನಪರ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

key words : Congress-leaving-humiliation-Attempt-Minister-B.Sriramulu