ಇಂದು ಸಂಜೆ ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಲಿರುವ ಸಿಎಂ ಬಿ.ಎಸ್ ಯಡಿಯೂರಪ್ಪ: ನಾಳೆ ವೈಮಾನಿಕ ಸಮೀಕ್ಷೆ…

Promotion

ಬೆಂಗಳೂರು,ಆ,7,2019(www.justkannada.in): ರಾಜ್ಯದಲ್ಲಿ ಪ್ರವಾಹ ಹಿನ್ನೆಲೆ ದೆಹಲಿ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ರಾಜ್ಯಕ್ಕೆ ಆಗಮಿಸಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ಇಂದೇ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.

ಇಂದು ಸಂಜೆ 5 ಕ್ಕೆ ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ಬೆಳಗಾವಿಗೆ ತೆರಳಲಿರುವ ಸಿಎಂ ಬಿ.ಎಸ್ ಯಡಿಯೂರಪ್ಪ, ಇಂದು ಸಂಜೆ 7 ಕ್ಕೆ ಬೆಳಗಾವಿಯಲ್ಲಿ ಮಳೆ ಹಾನಿ ಪ್ರದೇಶಗಳಿಗೆ  ಭೇಟಿ ನೀಡಲಿದ್ದಾರೆ. ಬಳಿಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿರುವ ಸಿಎಂ ನಾಳೆ ಬೆಳಗ್ಗೆ 8 ಕ್ಕೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲಿಸಲಿದ್ದಾರೆ.

ನಾಳೆ ಇಡೀ ದಿನ ಮಳೆ‌ಹಾನಿ ಪ್ರದೇಶಗಳಲ್ಲಿ ಸಿಎಂ  ಬಿಎಸ್ ವೈ ಪರಿಶೀಲನೆ ನಡೆಸಲಿದ್ದಾರೆ. ಹವಾಮಾನ ಸ್ಥಿತಿ ಸರಿಯಿದ್ದಲ್ಲಿ ನಾಳೆ ವೈಮಾನಿಕ ಸಮೀಕ್ಷೆ ಮೂಲಕ ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿ ಅರಿಯಲಿದ್ದಾರೆ. ಹಾಗಯೇ ಪರಿಶೀಲನೆ ವೇಳೆ ತುರ್ತು ಪರಿಹಾರ ಕಾಮಗಾರಿ ಅವಲೋಕನ ಮಾಡಲಿರುವ ಸಿಎಂ ಬಿಎಸ್ ವೈ, ಸಂತ್ರಸ್ತರನ್ನ ಭೇಟಿ ಮಾಡಿ ಧೈರ್ಯ ತುಂಬಲಿದ್ದಾರೆ.  ಬಳಿಕ‌ ನಾಳೆ ರಾತ್ರಿ ಬೆಂಗಳೂರಿಗೆ ಸಿಎಂ ಮರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

key words: CM BS Yeddyurappa – visit – flood- Belgavi district -this evening.