‘ಮುಖ್ಯಮಂತ್ರಿ ಕಪ್’ ಫುಟ್’ಬಾಲ್ ಪಂದ್ಯಾವಳಿ ಆತಿಥ್ಯ ಮಂಡ್ಯಕ್ಕೆ

Promotion

ಮಂಡ್ಯ, ಜೂನ್ 06, 2019 (www.justkannada.in): 34 ವರ್ಷಗಳ ನಂತರ ಅಖಿಲ ಭಾರತ ಆಹ್ವಾನಿತ ಫುಟ್ ಬಾಲ್ ಟೂರ್ನಿಗೆ ಮಂಡ್ಯ ಆತಿಥ್ಯ ವಹಿಸಿಕೊಂಡಿದೆ.

ಜೂನ್ ಅಂತ್ಯಕ್ಕೆ ಇಲ್ಲವೇ, ಜುಲೈ ಮೊದಲ ವಾರದಲ್ಲಿ ಮಂಡ್ಯದಲ್ಲಿ ಮುಖ್ಯಮಂತ್ರಿ ಕಪ್ ಅಖಿಲ ಭಾರತ ಆಹ್ವಾನಿತ ಫುಟ್ ಬಾಲ್ ಟೂರ್ನಿ ಆಯೋಜಿಸಲಾಗಿದೆ.

ಸಚಿವ ಸಿ.ಎಸ್. ಪುಟ್ಟರಾಜು ಈ ಕುರಿತು ಮಾಹಿತಿ ನೀಡಿದ್ದು, ಮಂಡ್ಯದಲ್ಲಿ ಈ ತಿಂಗಳ ಅಂತ್ಯಕ್ಕೆ ಇಲ್ಲವೆ, ಜುಲೈ ಮೊದಲ ವಾರ ಮುಖ್ಯಮಂತ್ರಿ ಕಪ್ ಅಖಿಲ ಭಾರತ ಆಹ್ವಾನಿತ ಫುಟ್ ಬಾಲ್ ಟೂರ್ನಿ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

15 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ವಿವಿಧ ರಾಜ್ಯಗಳ 15 ಕ್ಕೂ ಹೆಚ್ಚು ತಂಡಗಳು ಸುಮಾರು 300 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.