ಬಿಜೆಪಿಯವರೇ ಈ ಸರ್ಕಾರ ಬೇಡ ಅಂದ್ರೆ ಏನರ್ಥ..? ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕೆ.

Promotion

ಬೆಂಗಳೂರು,ಆಗಸ್ಟ್,9,2022(www.justkannada.in):  ರಾಜ್ಯ ಬಿಜೆಪಿ ಸರ್ಕಾರ ಜೀವಂತವಾಗಿಲ್ಲ. ಈ ಸರ್ಕಾರವನ್ನ ಬಿಜೆಪಿಯವರೇ ಬೇಡ ಎನ್ನುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ರಾಜ್ಯ ಸರ್ಕಾರದ ಬಗ್ಗೆ ಬಿಜೆಪಿಯವರೇ ಮಾತನಾಡುತ್ತಿದ್ದಾರೆ. ಈ ಸರ್ಕಾರ ಬದಲಾಗಿ ಬೇರೆ ಸರ್ಕಾರ ಬರಲೆಂದು ಮಾತನಾಡುತ್ತಿದ್ದಾರೆ. ಬಿಜೆಪಿಯರೇ ಈ ಸರ್ಕಾರ ಬೇಡ ಅಂದ್ರೆ ಏನರ್ಥ..? ಈ  ಸರ್ಕಾರ ಜೀವಂತವಾಗಿಲ್ಲ ಎಂದು ಅರ್ಥ ಅಲ್ಲವೇ..?  ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿ ಅನೇಕ ಒಳ್ಳೆಯ ಕಾರ್ಯಕ್ರಮಗಳನ್ನ ನೀಡಿದೆ ಸರ್ಕಾರ ಬಡವರಿಗೆ ಭೂಮಿ ಕೈಗಾರಿಕೆಗಳಿಗೆ ಭೂಮಿ ನೀಡಿದೆ. ಬ್ಯಾಂಕ್ ಗಳಿಗೆ ಅವಕಾಶ ಹೀಗೆ ಅನೇಕ ಕಾರ್ಯಕ್ರಮ ನೀಡಿದೆ. ಇದೆಲ್ಲಾ ದೇಶದ ಆಸ್ತಿ ಅಲ್ಲವೇ..? ಎಂದು ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು.

Key words: BJP – government-KPCC president- DK Shivakumar- criticized.